ಸ್ಥಳೀಯ ಸುದ್ದಿ

ವಕೀಲರ ಸಂಘದಲ್ಲಿ ಶೀವಲೀಲಾ ಕುಲಕರ್ಣಿ ಅವರಿಂದ ಮತಯಾಚನೆ

ಧಾರವಾಡ

ಇಂದು ಧಾರವಾಡದ ವಕೀಲರ ಸಂಘದಲ್ಲಿ, ಶ್ರೀ ವಿನಯ ಕುಲಕರ್ಣಿಯವರ ಪರವಾಗಿ ಅವರ ಧರ್ಮ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು ಮತಯಾಚಿಸಿದರು.

ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲರ ಸಂಘದ ಪ್ರಧಾನಕಾರ್ಯದರ್ಶಿ ಎನ್ ಆರ್ ಮಟ್ಟಿಯವರು ಮಾತನಾಡಿ ಈ ಹಿಂದೆ ನಮ್ಮ ಬೇಡಿಕೆ ಅನ್ವಯ ವಿನಯ ಕುಲಕರ್ಣಿಯವರು ವಿಶೇಷವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಅವರು ಸಹೃದಯರು ಅಭಿವೃಧ್ಧಿ ಹರಿಕಾರರು ಎಂದರು.

ನಂತರ ಮಾತನಾಡಿದ ಶಿವಲೀಲಾ ಕುಲಕರ್ಣಿಯವರು,
ತಮಗೆಲ್ಲರಿಗೂ ವಿನಯ ಕುಲಕರ್ಣಿಯವರು ಚಿರಪರಿಚಿತರು.ಕೋರ್ಟ ಆವರಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು.ಇವತ್ತು ಅವರು ಅನಿವಾರ್ಯ ಕಾರಣದಿಂದ ಜಿಲ್ಲೆಯ ಹೊರಗಿರಬಹುದು ಆದರೆ ಜನರ ಮನದಲ್ಲಿ ನೆಲೆಯೂರಿದ್ದಾರೆ.


ಐ.ಐ.ಟಿ ಗಾಗಿ ಜಮೀನು ಕೊಡಿಸಲು,ರೈತರೊಂದಿಗೆ ನಿರಂತರವಾಗಿ ಮಾತನಾಡಿ ಶ್ರಮ ವಹಿಸಿ ಐ ಐ ಟಿ ತರಲು ಮಂಚೂಣಿಯಲಿದ್ದರು.
ಅದೇ ರೀತಿ ಧಾರವಾಡ ಹೈಕೋರ್ಟ ಹೋರಾಟದ ನೇತೃತ್ವ ವಹಿಸಿದ ಕೀರ್ತಿ ಅವರಿಗಿದೆ,ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಿಂದ ಸಾವಿರಾರು ರೈತರಿಗೆ ಅನುಕೂಲವಾಗುವಂತೆ ಮಾಡಿ,ಧಾರವಾಡದ ಅಭಿವೃಧ್ಧಿಗೆ ಕಿರೀಟ ಪ್ರಾಯರಾಗಿದ್ದು,ಅವರ ಮೇಲೆ ತಮ್ಮೆಲ್ಲರ ಆಶೀರ್ವಾದ ಇರಲಿ ಎಂದು ವಿನಂತಿಸಿಕೊಂಡರು..

ಈ ಸಂಧರ್ಭದಲ್ಲಿ ಹಿರಿಯ ವಕೀಲರುಗಳಾದ ವಿ.ಡಿ ಕಾಮರೆಡ್ಡಿ,ಕೆ.ಎಲ್ ಪಾಟೀಲ,ಆರ್ ವಿ ಬೆಳ್ಳಕ್ಕಿ,ಜೆ ಎಲ್ ಜಾಧವ,ಸದಾನಂದ ಮುಂದಿನಮನಿ,ಪ್ರಕಾಶ ಸಿಂತ್ರಿ ರಜಿಯಾ ಬೇಗಂ ಸಂಗೊಳ್ಳಿ,ರೂಪಾ ಕರಂಗಾನೂರ,ರಾಜು ಕೋಟಿ,ಪ್ರಕಾಶ ಬಾವಿಕಟ್ಟಿ,ಎಮ್ ಎನ್ ತಾರಿಹಾಳ,ಮಂಜುನಾಥ ಮುಗ್ಗನವರ ಮುಂತಾದ ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button