ಶೀಘ್ರದಲ್ಲೇ ಟಾಟಾ ಮಾರ್ಕೊ ಪೋಲೊ ಕಾರ್ಮಿಕರ ಸಮಸ್ಯೆ ಇತ್ಯರ್ಥ
ಧಾರವಾಡ
ಕಳೆದ 15 ದಿನಗಳಿಂದ ಡಿಸಿ ಕಚೇರಿ ಎದುರು ಟಾಟಾ ಮಾರ್ಕೊ ಪೋಲೊ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಕಾರ್ಮಿಕರ ಸಮಸ್ಯೆ ಆಲಿಸಲು ಶಾಸಕ ಅರವಿಂದ ಬೆಲ್ಲದ ಆಗಮಿಸಿದ್ದರು.
ಕಾರ್ಮಿಕರ ಸಮಸ್ಯೆ ಬಹಳಷ್ಟಿದ್ದು, ಈಗಾಗಲೇ ಕಂಪನಿಯವರ ಜೋತೆಗೆ ಮಾತನಾಡಿರುವೆ. ಸಮಸ್ಯೆಯನ್ನು ಬಗೆಹರಿಸಲು ಇಬ್ಬರ ನಡುವೆ ಸಂಧಾನ ಸಭೆ ನಡೆಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ರು.
ಇದೇ ಸಂದರ್ಭದಲ್ಲಿ ಕಾರ್ಮಿಕರು ಕಂಪನಿ ನಡೆಸಿಕೊಳ್ಳುತ್ತಿರುವ ಕುರಿತು ಶಾಸಕರಿಗೆ ಸವಿವರವಾಗಿ ತಿಳಿಸಿಕೊಟ್ಟರು.
ಹಿಜಾಬ್ ವಿಚಾರವಾಗಿ ಮುಸ್ಕಾನ್ ಎನ್ನುವ ವಿದ್ಯಾರ್ಥಿನಿಗೆ ಉಗ್ರರು ಅಭಿನಂದನೆ ಸಲ್ಲಿಸಿದ್ದ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ , ಮುಸ್ಕಾನ ತಂದೆ ಖಂಡಿಸಿದ್ದ ರೀತಿಯಲ್ಲಿ
ಎಲ್ಲರೂ ಖಂಡಿಸಬೇಕು ಎಂದರು.
ದೇಶದ ಶಕ್ತಿಗಳು ಈ ವಿಚಾರದಲ್ಲಿ ಪ್ರಚೋದನೆ ಕೊಡುತ್ತಿವೆ. ದೇಶದಲ್ಲಿ ಎಲ್ಲಾ ಜಾತೀಯ ಹಾಗೂ ಧರ್ಮದ ಜನರಿದ್ದಾರೆ. ಕೆಲವು ಮುಸ್ಲಿಂ ನಾಯಕರು ತಮಗೆ ತಿಳಿದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ ಇದು ಸರಿಯಲ್ಲಾ ಎಂದರು. ಈಬಗ್ಗೆಸಿದ್ದರಾಮಯ್ಯ ಬಾಲಿಶತನದ ಹೇಳಿಕೆ ಕೊಡುತ್ತಿದ್ದಾರೆ ಎಂದರು.