ಸ್ಥಳೀಯ ಸುದ್ದಿ

ಶೂಟ್ ಮಾಡ್ತೇನಿ ಎಂದು ಪಿಸ್ತೂಲ್ ತೋರಿಸಿದ BJP ಮುಖಂಡ

ಧಾರವಾಡ

ಇದು ಪವರ್ ಸಿಟಿ‌ ನ್ಯೂಸ್ ಕನ್ನಡ ಎಕ್ಸಕ್ಲೂಸಿವ್ ಸ್ಟೋರಿ…

ಇವತ್ತು….
ಎಸಿ, ತಹಶಿಲ್ದಾರ ಹಾಗೂ ಪೊಲೀಸರು ಎಲ್ಲಾರು ನನ್ನ ಅಂಡರದಾಗ ಅದಾರ. ಏನ ಮಾಡಕೋತಿ ಮಾಡಕೋ ಹೋಗ….
ನಿಂದ ನೀ ಮಾಡ ….
ನಂದ ನಾ ಮಾಡತೇನ….. ನೋಡೋಣ ಆಗಿದ್ದ ಆಗೆ ಬಿಡಲಿ……

ಎಂದು ಆವಾಜ್ ಹಾಕಿರುವ ಬಿಜೆಪಿ ಮುಖಂಡನ ಸುದ್ದಿ ಇದು….

ಈ ಸ್ಟೋರಿ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಎಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ರಾಜಕೀಯ ನಾಯಕರು ತಮ್ಮದೇ ಸ್ಟೈಲ್ ನಲ್ಲಿ ಇರ್ತಾರೆ ಅಂತಾ.

ಪಿಸ್ತೂಲ್ ತೋರಿಸಿದ ಬಿಜೆಪಿ ಮುಖಂಡ

ಕೆಲವೊಂದಿಷ್ಟು ಮರಿ ಪುಡಾರಿಗಳು ಒಣ ಧಿಮಾಕು ಇಟ್ಟುಕೊಂಡು ಆ ನಾಯಕರ ಪರಿಚಯ ಈ ನಾಯಕ ಪರಿಚಯ ಅಂತಾ ಅವರ ಜೋತೆಗೆ ಫೋಟೊ ತೆಗೆಸಿಕೊಂಡು ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಾರೆ.

ಇಲ್ಲಿಯೂ ಕೂಡ ಹಾಲಿ ಶಾಸಕರ ಆಪ್ತ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕನೊಬ್ಬ ಮಾಡಿರುವ ಘನಂದಾರಿ ಕೆಲಸವನ್ನು ಪವರ್ ಸಿಟಿ‌ನ್ಯೂಸ್ ನಲ್ಲೆ ಎಳೆ ಎಳೆಯಾಗಿ ತೋರಿಸ್ತೀವಿ ನೋಡಿ…

ಇವರ ಹೆಸರು
ನಾಗಪ್ಪಾ‌ ಗಾಣಿಗೇರ ಅಂತಾ. ತೇಗೂರು ಗ್ರಾಮದ ಈ ಬಿಜೆಪಿ ಮುಖಂಡ ಪಿಸ್ತೂಲ್ ತೆಗೆದು ಧಮಕಿ ಹಾಕಿ, ಶೂಟ್ ಮಾಡೋದಾಗಿ ಸಾರ್ವಜನಿಕವಾಗಿಯೇ ಪಿಸ್ತೂಲ್ ತೊರಿಸಿ ಹೊಡೆಯುವದಾಗಿ ಧಮಕಿ ಹಾಕಿದ್ದ ವಿಡಿಯೋ ಇದು.

ಧಾರವಾಡ ಜಿಲ್ಲೆಯ ಹೊಸ ತೆಗೂರ‌ ಗ್ರಾಮದಲ್ಲಿ ನಡೆದಿರುವ ಘಟನೆ ಇದಾಗಿದೆ.

ಅಂಗಡಿಯ ವಿಚಾರಕ್ಕೆ ನಡೆದ ಈ ಜಗಳದಲ್ಲಿ
ತೇಗೂರು ಗ್ರಾಮದ
ಮಡಿವಾಳೆಪ್ಪ ಬೆಳವಲದ ಎಂಬುವವರಿಗೆ ಈ ರೀತಿ ಜೀವ ಬೆದರಿಕೆ ಹಾಗೂ ಧಮಕಿ ಹಾಕಲಾಗಿದೆ.

ಧಾರವಾಡ ಜಿಲ್ಲೆಯ
ಬಿಜೆಪಿ ನಾಯಕರು ಕೇಂದ್ರದಲ್ಲಿ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವ ಸ್ಥಾನದಲ್ಲಿ ಇರುವವರು.

ಇಂತಹ ನಾಯಕರುಗಳ ಮಧ್ಯೆ ತಿರುಗಾಡುವ ಈ ಬಿಜೆಪಿ ನಾಯಕ ಈ ರೀತಿ ಪಿಸ್ತೂಲ್ ತೋರಿಸಿ ಆವಾಂತರ ಮಾಡಿಕೊಂಡಿದ್ದು, ದೊಡ್ಡ ಮಟ್ಟಕ್ಕೆ ಜಿಲ್ಲೆಯ ರಾಜಕಾರಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು
ಆರೋಪಿಯನ್ನು ರಾಜಕೀಯ ಒತ್ತಡಕ್ಕೆ ಮಣಿದು ಮುಚ್ಚಿ ಹಾಕ್ತಾರಾ? ಅಥವಾ ಜೈಲಿಗೆ ಕಳಿಸ್ತಾರಾ ನೋಡಬೇಕಿದೆ.

ಇನ್ನು ಈ ಪ್ರಕರಣದ
ಸಂಪೂರ್ಣ ಬೆಳವಣಿಗೆಯನ್ನು ಪವರ್ ಸಿಟಿ ನ್ಯೂಸ್ ಕನ್ನಡ ನಿಮ್ಮ ಮುಂದೆ ಬಿಚ್ಚಡಲಿದೆ.

ಪವರ್ ಸಿಟಿ ನ್ಯೂಸ್ ಕನ್ನಡ ಇದು ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button