ಕೊಪ್ಪಳಸ್ಥಳೀಯ ಸುದ್ದಿ

ಸರಕಾರಿ ಶಾಲೆಗೆ 1 ಲಕ್ಷ ದೇಣಿಗೆ ನೀಡಿದ್ದ ಅಪ್ಪು

ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ ಏಕಾಏಕಿ ನಮ್ಮನ್ನ ಅಗಲಿದ್ದಾರೆ. ಭೌತಿಕವಾಗಿ ಈಗ ಅವರು ನಮ್ಮೊಂದಿಗೆ ಇಲ್ಲ. ಆದರೆ ಅವರು ಇರುವಷ್ಟು ದಿನ ಜನರಿಗೆ ಏನು ಮಾಡಿದ್ದಾರೆ ಎಂಬುವುದು ಈಗ ಉಳಿದಿವೆ. ಅದಕ್ಕೆ ಉದಾಹರಣೆ ಯಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರದ ಸರಕಾರಿ ಪ್ರೌಢ ಶಾಲೆಗೆ ಅಪ್ಪು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ದೇಣಿಗೆಯ ಚೆಕ್ ನೀಡಿದ ನಂತರ ಅಲ್ಲಿ ಅವರೇ ಆಟೋ ಗ್ರಾಫ್ ನೀಡಿದ್ದು ವಿಶೇಷವಾಗಿದೆ. ಪುನೀತ್ ರಾಜಕುಮಾರ ಅಭಿನಯದ ಜೇಮ್ಸ್ ಚಿತ್ರದ ಚಿತ್ರಿಕರಣವು 2020 ಅಕ್ಟೋಬರ್ ತಿಂಗಳಲ್ಲಿ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರದೇಶವಾಗಿರುವ ಮಲ್ಲಾಪುರ ಬಳಿ ನಡೆದಿದೆ. ಒಟ್ಟು 8 ದಿನಗಳ ಕಾಲ ಪುನೀತ್ ರಾಜಕುಮಾರ ಚಿತ್ರಕರಣಕ್ಕಾಗಿ ಈ ಸ್ಥಳದಲ್ಲಿದ್ದರು. ಈ ದಿನಗಳಲ್ಲಿ ಅವರು ಮಲ್ಲಾಪುರ ಬಳಿಯಲ್ಲಿ ಚಿತ್ರಕರಣವಾಗುತ್ತಿರು ವದರಿಂದ ದಿನನಿತ್ಯ ಮಲ್ಲಾಪುರ ಸರಕಾರಿ ಪ್ರೌಢಶಾಲೆಯ ಮುಂದೆ ಹೋಗುತ್ತಿದ್ದರು, ಇಲ್ಲಿ ಪ್ರೌಢಶಾಲೆಗೆ ಮೂಲಭೂತ ಸೌಲಭ್ಯ ಅವಶ್ಯವಿರುವದು ಗೊತ್ತಾಗಿ ಗ್ರಾಮಸ್ಥರು ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ತಾವೇ ಸಂಪರ್ಕಿಸಿ ಶಾಲೆಯ ಅಭಿವೃದ್ದಿಗೆ ತಾವು ಸಹಾಯ ಮಾಡುವುದಾಗಿ ಹೇಳಿ ದೇಣಿಗೆ ನೀಡಿದ್ರು ಅಂತಾ ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಾರೆ.
ಯಾರು ನಿರೀಕ್ಷಿಸದೇ ಇದ್ದರೂ ಪುನೀತ್ ರಾಜಕುಮಾರ ಒಂದು ಲಕ್ಷ ರೂಪಾಯಿ ಶಾಲೆಗೆ ದೇಣಿಗೆ ನೀಡಿದ್ದಾರೆ.‌ ಆ ಹಣದಿಂದ ಶಾಲೆಯಲ್ಲಿ 2 ಸ್ಮಾರ್ಟ್ ಕ್ಲಾಸ್ ಗಳನ್ನು ಆರಂಭಿಸಿದ್ದಾರೆ. ಅಪ್ಪು ಮುಂದಿನ ದಿನಗಳಲ್ಲಿ ಇನ್ನೂ 3 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಈಗ ಅವರಿಲ್ಲ, ಆದರೂ ಅಪ್ಪು ಹೆಸರು ಶಾಶ್ವತವಾಗಿ ಉಳಿಯಲಿ ಎಂಬ ಕಾರಣಕ್ಕೆ ಅವರ ಹೆಸರಿನಲ್ಲಿ ವಿಜ್ಞಾನ ಪಾರ್ಕ್ ಮಾಡಲು ಗ್ರಾಮಸ್ಥರು ಸಿದ್ದತೆ ಮಾಡಿಕೊಂಡಿದ್ದಾರೆ.

ಪುನೀತ್ ರಾಜಕುಮಾ ರರಿಗೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಾಗೂ ಪೌರಾಣಿಕ ಸ್ಥಳಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಇದೇ ಕಾರಣಕ್ಕೆ ಅವರು ಆಗಾಗ ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರು. ಅಪ್ಪು ಈಗ ನೆನಪು ಮಾತ್ರ. ಕೊಪ್ಪಳ ಜಿಲ್ಲೆಯ ಜನತೆಗೆ ಅಪ್ಪು ಸಹಾಯ ಮಾಡಿರುವುದು ಶಾಶ್ವತವಾಗಿ ಉಳಿಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button