ಸ್ಥಳೀಯ ಸುದ್ದಿ

ಸರಿಸಮ ಸ್ನೇಹಿತರಿಂದ ಗೆಳೆಯನಿಗೆ ಸನ್ಮಾನ

ಗಜೇಂದ್ರಗಡ :ಬಿ.ಎಸ್.ಎಸ್ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಪ್ರಕಾಶ್ ಎಸ್ ಹುಲ್ಲೂರ ಇವರು “ಅಸೆಸಮೆಂಟ್ ಆಫ್ ಸೋಶಿಯೋ ಎಕನಾಮಿಕ್ ಡೈಮನ್ಷನ್ ಆಫ್ ರೂರಲ್ ಡೆವಲಾಫಮೆಂಟ್ ಪ್ರೋಗ್ರಾಂ ಇನ್ ಗದಗ ಡಿಸ್ಟ್ರಿಕ್ಟ್ ಎ ಜಿಯೋಗ್ರಾಫಿಕಲ್ ಅನಾಲಿಸಿಸ್” ಎಂಬ ಮಹಾಪ್ರಬಂಧವನ್ನು ಉತ್ಕೃಷ್ಟ ಸಾಮರ್ಥ್ಯ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡದ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಡಾ.ಎಲ್ ಟಿ ನಾಯಕರವರ ಮಾರ್ಗದರ್ಶನದಲ್ಲಿ ಮಂಡಿಸುವುದು ಮೂಲಕವಾಗಿ ಡಾಕ್ಟರೇಟ್ ಆಫ್ ಫಿಲಾಸಫಿ ಪದವಿ ಪಡೆದು ಗದಗ ನಗರಕ್ಕೆ ಹಿರಿಮೆಯನ್ನು ಹೆಚ್ಚಿಸಿದ್ದಕ್ಕಾಗಿ ಬಾಲ್ಯದಿಂದ ಬೆಳೆದು ಬಂದ ಸಹಪಾಠಿ ಬಳಗದ ಕಡೆಯಿಂದ ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಕಾಶ್ ಎಸ್ ಹುಲ್ಲೂರ ಕೆಲವು ಸಂಬಂಧಗಳಿಗೆ ಈ ಭೂಮಿಯ ಮೇಲೆ ಎಂದೂ ಸಾವು ಇರುವುದಿಲ್ಲ- ಆ ಸಂಬಂಧವೇ ಗೆಳೆತನ. ಸ್ನೇಹವು ಗಡಿ, ಭಾಷೆ, ಜಾತಿ ಧರ್ಮ ಹೀಗೆ ಎಲ್ಲಾ ಕಟ್ಟುಪಾಡುಗಳನ್ನು ಮೀರಿದ ಪವಿತ್ರವಾದ ಸಂಬಂಧ. ಗೆದ್ದಾಗ ನಮ್ಮೊಡನೆ ಸಂತೋಷ ಹಂಚಿಕೊಂಡು, ಬಿದ್ದಾಗ ನಾನಿದ್ದೀನಿ ನಿನ್ನೊಡನೆ ಎಂದು ಧೈರ್ಯ ತುಂಬಿ ನಮ್ಮನ್ನು ಮೇಲಕ್ಕೆತ್ತುವ ಸ್ನೇಹಿತರು ನಿಜಕ್ಕೂ ದೇವರ ವರವೇ ಸರಿ ಎಂದರು

ಈ ಸಂದರ್ಭದಲ್ಲಿ ಅರುಣ್ ಪೂಜಾರ,ಅಲ್ಲಾಭಕ್ಷಿ ನದಾಫ,ಬಸು ಕುರುಬರ,ಕಳಕೇಶ ಕುಂಬಾರ,ರಫೀ ಹವಾಲ್ದಾರ್, ರಮೇಶ್ ರಾಮಜಿ, ಬಸು ಉಣಚಗೇರಿ,ಬಾಳು ಘೋರ್ಪಡೆ ನಾಗರಾಜ ಮಂತಾ, ಬಸು ಬಳಿಗೇರಿ,ದಾವಲ್ ಕಲಾಲ, ಮಂಜುನಾಥ್ ಲಕ್ಕಲಕಟ್ಟಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *