ಸ್ಥಳೀಯ ಸುದ್ದಿ

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಹವಾ

ಧಾರವಾಡ

ಜನೇವರಿ 12 ರಿಂದ 16 ರವರೆಗೆ ಒಟ್ಟು 5 ದಿನಗಳ ಕಾಲ ರಾಷ್ಟ್ರೀಯ ಯುವಜನೋತ್ಸವ ಧಾರವಾಡ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ,
ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ರು. ಉತ್ತರ ಕರ್ನಾಟಕದಲ್ಲಿ ಮೋದಿ ಹವಾ ಜೋತೆಗೆ ಧಾರವಾಡ ಜಿಲ್ಲೆಯಲ್ಲಿ ಅಕ್ಷರಶ ರಾಷ್ಟ್ರೀಯ ಯುವಜನೋತ್ಸವದಿಂದ
ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸ್ವಾಮಿ ವಿವೇಕಾನಂದರ 161 ನೇ ಜಯಂತಿ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರೀಯ 26 ನೇ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಮಾಡಿದ್ರು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ,
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್​, ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್​ , ಧಾರವಾಡ ಜಿಲ್ಲಾಧಿಕಾರಿ ಗುರುದತ್ತ
ಹೆಗಡೆ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ,ಹಿರೇಮಠ ಅದ್ಧೂರಿಯಾಗಿ ಸ್ವಾಗತ ಕೋರಿದ್ರು. ಹುಬ್ಬಳ್ಳಿಗೆ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಎಸ್​ಪಿಜಿಯಿಂದ ಹುಬ್ಬಳ್ಳಿಯಲ್ಲಿ
ಬೀಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯ ರಸ್ತೆಗಳಲ್ಲಿ ರೋಡ ಶೋ ನಡೆಸುವ ಮಾರ್ಗ ಮಧ್ಯೆ ಬೀಗಿ ಭದ್ರತೆ
ಹಾಕಲಾಗಿತ್ತು.

ಇನ್ನು ಹುಬ್ಬಳ್ಳಿಯ ಸುತ್ತಮುತ್ತಲೂ ರಂಗೋಲಿ ಹಾಕಿ, ಮೋದಿ ಅವರಿಗೆ ಸ್ವಾಗತ ಕೋರಲಾಯಿತು. ಮೋದಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದ ಮುಂದೆ ವಾಹನದಿಂದ ಇಳಿದು ಜನರತ್ತ ಕೈಬಿಸಿದ್ರು.


ಪ್ರಧಾನಿ ರೋಡ ಶೋ ವೇಳೆ ಪ್ರಧಾನಿಗೆ ಬ್ಯಾರಿಕೇಡ್ ಹಾರಿ, ಹೂವಿನ ಮಾಲೆ ಹಾಕಲು ಬಂದ ವ್ಯಕ್ತಿಯನ್ನು ಪೊಲಿಸರು ವಶಕ್ಕೆ ಪಡೆದ್ರು. ಇಲ್ಲಿ ಭದ್ರತೆ ವೈಫಲ್ಯವೂ ಕಂಡು ಬಂತು.

ಈ ವಿಶೇಷ ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮೂರ್ತಿ, ಹಾವೇರಿ ಜಿಲ್ಲೆಯಲ್ಲಿ ತಯಾರಿಸಲಾದ ಯಾಲಕ್ಕಿ ಹಾರ, ಯಾಲಕ್ಕಿ ಪೇಟ,
ಧಾರವಾಡದಲ್ಲಿ ವಿಶೇಷವಾಗಿ ನೇಯಲಾದ ಕಸೂತಿ ಕಲೆ ಹೊಂದಿರುವ ಹಾಂಡ್​ ಲೂಮ್​ ಶಾಲು, ಮತ್ತು ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಲಾದ ತ್ರೀವರ್ಣ ಧ್ವಜವನ್ನು ಟೀಕ್​ವುಡನಲ್ಲಿ ತಯಾರಿಸಿ, ಅದಕ್ಕೆ
ಚೌಕಟ್ಟು ಹಾಕಿರುವ ಫ್ರೇಮನ್ನು ಉಡುಗೊರೆಯಾಗಿ ಕೊಟ್ಟು ಸನ್ಮಾನಿಸಿ ಗೌರವಿಸಲಾಯಿತು.

ಹುಬ್ಬಳ್ಳಿ-ಧಾರವಾಡದಲ್ಲಿ 5 ದಿನಗಳ ಕಾಲ ನಡೆಯುವ ಈ ರಾಷ್ಟ್ರೀಯ ಯುವಜನೋತ್ಸವಕ್ಕೆ ಹೊರ ರಾಜ್ಯಗಳಿಂದ ಸುಮಾರು 7,500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು
ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಆಗಮಿಸಿದ್ದಾರೆ. ಇನ್ನು ಧಾರವಾಡದ ಕೆಸಿಡಿ ಕಾಲೇಜಿನ ಮೈದಾನದಲ್ಲಿ ಖ್ಯಾತ ಹಿನ್ನೆಲೆ ಸಂಗೀತ ಗಾಯಕ ವಿಜಯಪ್ರಕಾಶ ಅವರ ಹಾಡಿನ ಮೋಡಿ ನಡೆಯಲಿದೆ.
ಧಾರವಾಡದ ಲಕ್ಷಾಂತರ ಮಂದಿ ವಿಜಯಪ್ರಕಾಶ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ರಾಷ್ಟ್ರೀಯ ಯುವಜನೋತ್ಸವದಿಂದ ಧಾರವಾಡ ಜಿಲ್ಲೆಯ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ
ಮಿಂಚಿದ್ದು ಮಾತ್ರ ಸುಳ್ಳಲ್ಲಾ..

Related Articles

Leave a Reply

Your email address will not be published. Required fields are marked *

Back to top button