ಸ್ಥಳೀಯ ಸುದ್ದಿ

ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಗಾಗಿ 2023-24 ನೇ ಸಾಲಿನಲ್ಲಿ 1130 ಕೋಟಿ ಬಜೆಟ್ ಮಂಡನೆ

Click to Translate

ಧಾರವಾಡ

ಅವಳಿನಗರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತಿರುವ ಜನಪ್ರೀಯ ಮೇಯರ್ ಈರೇಶ ಅಂಚಟಗೇರಿ ಅವರು ಪಾಲಿಕೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ತೆರಿಗೆ ಹೊರೆ ಬೀಳದಂತೆ ಉಳಿತಾಯದ ಬಜೆಟ್ ಮಂಡನೆ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಭಾಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರ ನೇತೃತ್ವದಲ್ಲಿ 2023-2024 ನೇ ಸಾಲಿನ ಆಯವ್ಯಯಗಳ (ಬಜೆಟ್) ಮಂಡನೆಯಾಗುವ ಮೂಲಕ ಅಭೂತಪೂರ್ವ ಬಜೆಟ್ ಮಂಡನೆ ಮಾಡಿದ್ರು.

ಈ ಬಜೆಟ್ ನಲ್ಲಿ ಸಾರ್ವಜನಿಕರಿಗೆ ಆರ್ಥಿಕ ಹೊರೆಯನ್ನುಂಟು ಮಾಡದೇ, ವಾಣಿಜ್ಯ ಹಾಗೂ ಇನ್ನಿತರ ವ್ಯಾಪಾರಗಳ ಆಧಾರಿತ ಮೇಲಿನ ತೆರಿಗೆಯ ಆಧಾರದ ಮೇಲೆ 1130 ಕೋಟಿಗಳ ಬಜೆಟ್ ನ್ನು ಮಂಡಿಸಲಾಯಿತು.

ಪ್ರಪ್ರಥಮ ಬಾರಿಗೆ ಪ್ರತಿಯೊಬ್ಬ ಪಾಲಿಕೆಯ ಸದಸ್ಯರಿಗೆ ವಾರ್ಡ್ ಗಳ ಅಭಿವೃದ್ಧಿ ದೃಷ್ಟಿಯಿಂದ 75 ಲಕ್ಷಗಳ ಅನುದಾನವನ್ನು ನೀಡುವುದಾಗಿ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ಉಮಾ ಮುಕುಂದರವರು, ಸಭಾನಾಯಕರಾದ ತಿಪ್ಪಣ್ಣ ಮಜ್ಜಿಗಿರವರು, ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಿವಾನಂದ ಮೆಣಸಿನಕಾಯಿ ರವರು, ಪಾಲಿಕೆ ಆಯುಕ್ತರಾದ ಗೋಪಾಲಕೃಷ್ಣರವರು, ಹಾಗೂ ಪಾಲಿಕೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button