ಬರ್ಥಡೆಗೆಂದು ಕರೆದವರು ಚಾಕು ಚುಚ್ಚಿದರು!
Birthday party

POWER CITYNEWS: KALGHATGI
ಹುಬ್ಬಳ್ಳಿ /ಕಲಘಟಗಿ : ಹುಬ್ಬಳ್ಳಿಯ ಕೆಲ ಯುವಕರು ಕಲಘಟಗಿ ರಸ್ತೆಯ “ವಿಲೇಜ್ ದಾಭಾ”ದಲ್ಲಿ ಬರ್ಥಡೆ ಪಾರ್ಟಿ ನಡೆಸುತ್ತಿದ್ದ ವೇಳೆ ತಡರಾತ್ರಿ ಸ್ನೇಹಿತರ ಮಧ್ಯೆಯೆ ಸೌಂಡ್ ಸಿಸ್ಟಮ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಧಾರವಾಡ ಮೂಲದ ಯುವಕನಿಗೆ ಹುಬ್ಬಳ್ಳಿ ಮೂಲದ ಯುವಕ ಚಾಕುವಿನಿಂದ ಇರಿದ ಘಟನೆ ಕಲಘಟಗಿ ಪೊಲೀಸ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಇರಿತಕ್ಕೊಳಗಾದ ಯುವಕನನ್ನು ಧಾರವಾಢದ ಜನ್ನತ್ ನಗರದ ನಿವಾಸಿ ಕಾಜುಲೆನ್ ಕೊಟೂರ
ಎಂದು ಗುರುತಿಸಲಾಗಿದೆ.
ಇನ್ನೂ ಹುಬ್ಬಳ್ಳಿ ಮೂಲದ ಮಂಟೂರು ರಸ್ತೆಯ ಇಮ್ತಿಯಾಜ್ ಖಾನ್ ಜಬ್ಬಾರ ಖಾನ್ ಪಠಾಣ ಎಂಬುವವನ ಮಗನ ಬರ್ಥಡೆ ಪಾರ್ಟಿಯನ್ನು “ವಿಲೇಜ್ ದಾಭಾ” ಎಂಬಲ್ಲಿ ಆಚರಿಸುತ್ತಿದ್ದರು. ಇ ವೇಳೆ ಸೌಂಡ್ ಸಿಸ್ಟಮ್ ಕುರಿತು ಇಬ್ಬರ ಸ್ನೇಹಿತರಲ್ಲಿ ವಾಗ್ವಾದ ಶುರುವಾಗಿದೆ. ಇ ವೇಳೆ ಮಹ್ಮದ ಇಬ್ರಾಹಿಂ ಇಫ್ರಾಜ್ ಸಿತಾರವಾಲೆ ತನ್ನ ಬಳಿಯಿದ್ದ ಡ್ರ್ಯಾಗನ್ ನಿಂದ ಕಾಜುಲೆನ್ ಕೋಟುರನ ಹೊಟ್ಟೆಯ ಭಾಗಕ್ಕೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಗಂಭೀರ ಗಾಯಗೊಂಡ ಯುವಕನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಘಟನಾ ಸ್ಥಳಕ್ಕೆ ಕಲಘಟಗಿ ಪೊಲಿಸ್ ಅಧಿಕಾರಿ ಶ್ರೀಶೈಲ್ ಕೌಜಲಗಿ ಭೇಟಿ ನೀಡಿದ್ದು ಗಾಯಾಳುವಿನ ತಂದೆ ನೀಡಿದ ದೂರಿನ ಮೇರೆಗೆ ಕಲಘಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಭಂದಿಸಿದಂತೆ ಆರೋಪಿಯೊಬ್ಬನನ್ನು ಪೊಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದು ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ಕೈಗೊಂಡಿರುವ ಪೊಲಿಸರು ಘಟನೆ ವೇಳೆಗೆ ಭಾಗಿಯಾಗಿದ್ದರು ಎನ್ನಲಾದ ಇನ್ನುಳಿದ ಆರೋಪಿಗಳಿಗೆ ಶೋಧಕಾರ್ಯ ಮುಂದುವರೆಸಿದ್ದಾರೆ.
