BREAKING NEWSCITY CRIME NEWSDHARWADHubballiPolitical newsTWINCITYರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
Trending

ಹಿಂಡಸ್ಗೇರಿಗೆ “ಅಂಜುಮನ್”ಕಿರೀಟ:ಕೈ ಕೊಟ್ಟ“ಸವಣೂರ”ಆಟೊ!

Anjuman e islaam election !

POWER CITYNEWS : HUBBALLI

ಹುಬ್ಬಳ್ಳಿ :ಕಳೆದ ಬಾರಿಗಿಂತ 2024 ರ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನಡೆದ ತುರುಸಿನ ಚುನಾವಣೆಯಲ್ಲಿ ಪ್ರತ್ಯೇಕ ಬಣಗಳ ಆಯ್ಕೆಗೆ ಇಂದು ಶಾಂತಯುತ ವಾಗಿ ಮತದಾನ ನಡೆದ ಬೆನ್ನಲ್ಲೇ ಮತ ಎಣಿಕೆ ಕೂಡ ನಡೆಯಿತು.

ಆದ್ರೆ ಎಲ್ಲ ಬಣಗಳನ್ನು ಹಿಂದಿಕ್ಕಿದ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಗುಂಪು ವಿಜಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಶತ ಶತಮಾನದ ಇತಿಹಾಸವಿರುವ ಸ್ಥಳೀಯ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ಅಧಿಕಾರಕ್ಕಾಗಿ ಇದೇ ಮೊದಲ ಬಾರಿಗೆ,ಐದು ಬಣಗಳು ಚುನಾವಣಾ ಕಣದಲ್ಲಿದ್ದವು.

ಆ ಪೈಕಿ ಟ್ರಾಕ್ಟರ್ ಚಿಹ್ನೆಯಡಿ ಚುನಾವಣಾ ಕಣಕ್ಕೆ ಇಳಿದಿದ್ದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ( ಅಧ್ಯಕ್ಷ) ನೇತೃತ್ವದ ಗುಂಪಿನ ಅಬ್ದುಲ್ಲಾ ಅತ್ತಾರ (ಉಪಾಧ್ಯಕ್ಷ), ಬಶೀರ್ ಹಳ್ಳೂರ (ಕಾರ್ಯದರ್ಶಿ), ದಾದಾ ಹಯಾತ್ ಖೈರಾತಿ (ಖಜಾಂಚಿ,) ಮಹಮದ್ ರಫೀಕ್ ಬಂಕಾಪುರ (ಜಂಟಿ ಕಾರ್ಯದರ್ಶಿ), ಮಹಮದ್‌ ಇರ್ಷಾದ್(ಬಲ್ಲಾ ಶೆಟ್) ಆಸ್ಪತ್ರೆ ಮಂಡಳಿಗೆ ಸಹಿತ 52 ಜನಮುನ್ನಡೆ ಸಾಧಿಸುವ ಮೂಲಕ ಗೆಲವು ತಮ್ಮದಾಗಿಸಿಕೊಂಡರು.

ಕಳೆದ ಬಾರಿ ನಿರ್ಣಾಯಕ ಪಾತ್ರ ವಹಿಸಿದ್ದ ಅಲ್ತಾಫ್ ಹಳ್ಳೂರ ಈ ಬಾರಿಯೂ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಲ್ತಾಫ್ ಹಳ್ಳೂರ ಈ ಬಾರಿಯೂ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಆಟೋ ಚಿನ್ಹೆಯೊಂದಿಗೆ ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಪ್ರಸಕ್ತಸಾಲಿನ ಅಧಿಕಾರದಲ್ಲಿದ್ದ ಮಹ್ಮದ ಯೂಸೂಫ್ ಸವಣೂರ, ಅಲ್ತಾಫ್‌ ಕಿತ್ತೂರ ಬಣ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ವಿಫಲವಾಗಿದ್ದು ಹಿನಾಯ ಸೊಲನುಭವಿಸಿದೆ.

ಇನ್ನೂ ದಿ. ಜಬ್ಬಾರಖಾನ ಹೊನ್ನಳ್ಳಿ ಗುಂಪಿನಿಂದ ಸ್ಪರ್ಧೆಗಿಳಿದಿದ್ದ ಹೆಲಿಕಾಪ್ಟರ್ ಚಿನ್ಹೆಯ ಎನ್‌.ಡಿ.ಗದಗಕರ್,ವಹಾಬ್ ಮುಲ್ಲಾ ತಂಡ ಹಾಗೂ ಮಝರ್ ಖಾನ್ ಮತ್ತು ಅನ್ವರ ಮುಧೋಳ ಸಾರಥ್ಯದ ( ಪೆನ್ ) ಬಾಣ,ಡೈಮಂಡ್, ಪೈಪೋಟಿ ನೀಡಿದರೂ ಯಶಸ್ವಿಯಾಗಲಿಲ್ಲ.

ಒಟ್ಟು 11,903 ಮತದಾರರು ಇಂದು ಬೆಳಿಗ್ಗೆ 8ಗಂಟೆಗೆ ಆರಂಭಗೊಂಡ ಮತದಾನ ಸಾಯಂಕಾಲ 5ರವರೆಗೆ ಶೇ.79ರಷ್ಟು ಮತದಾನ ನಡೆಯಿತು. ತದನಂತರ ಘಂಟೀಕೇರಿಯ ಸರಕಾರಿ ಪ್ರೌಢಶಾಲೆ, ಸರದಾರ ಮೆಹಬೂಬ್ ಅಲಿ ಖಾನ್ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮತ ಎಣಿಕೆ ನಡೆದಿದ್ದು ಅಂತಿಮ ಫಲಿತಾಂಶದಲ್ಲಿ ಹಿಂಡಸಗೇರಿ ತಂಡ ಅಂಜುಮನ್ ಸಂಸ್ಥೆಯ ಅಧಿಕಾರ ತಮ್ಮ ಹಿಡಿತಕ್ಕೆ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button