BREAKING NEWSDHARWADHubballiPolitical newsTWINCITY

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿ ನೇಮಕ ಹಿಂಪಡೆದ ರಾಜ್ಯಸರ್ಕಾರ!

Wasim Bhavimani!

POWER CITY NEWS : DHARWAD

ಧಾರವಾಡ :ಭಾರತ ಸರ್ಕಾರದ ಘನತೆವೆತ್ತ‌ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಧಾರವಾಡದ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿಯ ನೇಮಖಾತಿಯನ್ನು ಸರ್ಕಾರ ತಡೆಹಿಡಿದಿದೆ.

ಹೌದು ಹೈಕೋರ್ಟನಲ್ಲಿ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿ ನೇಮಕ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವ ಮೂಲಕ ಆಗಬಹುದಾದ ಮುಜುಗುರವನ್ನು ತಪ್ಪಿಸಿಕೊಂಡಂತೆ ಆಗಿದೆ.

ರಾಜ್ಯ ಸರ್ಕಾರದ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ರಂಗನಾಥ ಜಿ ಅವರು ಈ ಅಧಿಕೃತ ಆದೇಶ ಹೊರಡಿಸಿದ್ದು, ಆಡಳಿತಾಧಿಕಾರಿಯನ್ನು ತಡೆ ಹಿಡಿದಿದಕ್ಕೆ ಕಾರಣ ಕೊಟ್ಟಿದ್ದಾರೆ. 28-12-2023 ರಂದು ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು.
ಮಾನ್ಯ ಸರ್ವೋಚ್ಚ ನ್ಯಾಯಾಲಯದ SLP(C) ಡೈರಿ ಸಂಖ್ಯೆ 1605/2023 ಪ್ರಕರಣದ ಆದೇಶದ ಪ್ಯಾರಾ ಸಂಖ್ಯೆ 9 ರಂತೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ W.A.No 10064/2023 C/W. WA No.100165/2023 ಪ್ರಕರಣವು ವಿಚಾರಣೆ ಹಂತದಲ್ಲಿದೆ.

ಆಡಳಿತಾಧಿಕಾರಿಗೆ ಸಂಬಂಧಿಸಿದಂತೆ ಹೈಕೋರ್ಟನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯ ಪ್ರಕರಣ ವಿಚಾರಣೆ ಹಂತದಲ್ಲಿರುವ ಕಾರಣ ಸರ್ಕಾರ ಎಚ್ಚೆತ್ತುಕೊಂಡು ಈ ನಿರ್ಧಾರ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button