BidarBJPBREAKING NEWSCITY CRIME NEWSIshwar khandrePolice

ಸಮಾಜಘಾತುಕರ ಬೆಂಬಲಕ್ಕೆ ನಿಂತ ಬಿಜೆಪಿ : ಈಶ್ವರ ಖಂಡ್ರೆ!

Mahesh sajjan!

POWER CITYNEWS : BIDAR

ಬೀದರ್ : ಹುಬ್ಬಳ್ಳಿಯ ಲಾಂಗ್ ಪೆಂಡಿಂಗ್ ಕೇಸ‌ನಲ್ಲಿ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಂಧನದ ವಿಚಾರವಾಗಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ
ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ಪಾಲಿಸುತ್ತಿದ್ದಾರೆ.
ಅಷ್ಟೆ ಅಲ್ಲದೆ ಸಮಾಜ ಘಾತುಕ ಚಟುವಟಿಕೆಯಲ್ಲಿ ಯಾರೆಲ್ಲ ಭಾಗಿ ಇದಾರೋ ಅವರ ವಿರುದ್ದ ಪೊಲೀಸರು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.ಅಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡೊಕೆ ಆಗೊಲ್ಲಾ ಆದ್ರೆ ಇಂತಹ ವಿಷಯ ಬಿಟ್ರೆ, ಬೇರೆ ವಿಷಯ ಬಿಜೆಪಿ ಯವರಿಗಿಲ್ಲ. ಬಿಜೆಪಿಗೆ ಯಾವುದೇ ರಾಜಕೀಯ ವಿಷಯಗಳು ಇಲ್ಲದೇ ಇದ್ರೆ, ಇಂತಹ ವಿಷಯಗಳನ್ನ ಜಾತಿ ನಡುವೆ ಬಿಂಬಿಸೋಕೆ ಯತ್ನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆ ವಿಚಾರದಲ್ಲಿ ಬಿಜೆಪಿ ಜಾತಿ ಬಿಜ ಬಿತ್ತುವಂತೆ ಕೆಲಸವನ್ನ ಮಾಡ್ತಾ ಇದೆ.
ರಾಮ, ಲಕ್ಷ್ಮಣ, ಸೀತಾ ಇವರುಗಳು ಮಹಾಪುರುಷರು.
ಇವರಿಗೆ ಎಲ್ಲಾ ಧರ್ಮಿಯರು ಪೂಜೆ ಮಾಡ್ತಾನೆ, ಆರಾಧನೆ ಮಾಡ್ತಾರೆ.ಆದರೆ ರಾಜಕೀಯ ಲಾಭಕ್ಕಾಗಿ ಒಂದು ಪಕ್ಷದ ಮೇಲೆ, ಜಾತಿ ಮೇಲೆ ಗೂಬೆ ಕುಡಿಸುವ ಕೆಲಸವನ್ನ ಬಿಜೆಪಿ ಮಾಡ್ತಾ ಇದೆ.ಇದೂ ದೇಶದ ಸಾಮರಸ್ಯಕ್ಕೆ ಮಾರಕವಾಗಿದೆ.

ಇನ್ನೂ ನಮಗೆ ಸಿದ್ದರಾಮಯ್ಯನೇ ಶ್ರೀರಾಮ ಎಂಬ ಹೆಚ್‌.ಆಂಜನೇಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು. ಅದನ್ನ ಯಾವ ಕಂಟೆಸ್ಟ್‌ನಲ್ಲಿ ಹೇಳಿದ್ದಾರೊ ಅದನ್ನ ಅವರನ್ನೆ ಕೇಳಬೇಕು.ನಮ್ಮ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡ್ತಾ ಇದೆ.ಎಲ್ಲ ಸಮುದಾಯಗಳನ್ನ ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾ ಇದ್ದೇವೆ.ದ್ವೇಷ ಹಿಂಸೆಯನ್ನ ತಡೆಯುವ ಕೆಲಸ ಮಾಡ್ತಾ ಇದೆ.ಅರಣ್ಯ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರ. ರಾಜ್ಯದೆಲ್ಲೆಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆತಾ ಇದೆ.
100 ಕೋಟಿ ಬೆಲೆ ಬಾಳುವ ಅಸ್ತಿಯನ್ನ ಅಕ್ರಮವಾಗಿ ಒತ್ತುವರಿ ತೆರವು ಮಾಡಿದ್ದಾರೆ.ಅದನ್ನು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಮಾಡಿ, ತೆರವು ಮಾಡಿದ್ದಾರೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button