BELAGAVIBJPBREAKING NEWSCITY CRIME NEWSDHARWADPolicePolitical newsProtest

ಶ್ರೀರಾಮನ ಐತಿಹಾಸಕ ಪೂಜೆಗೆ ಅಯೋಧ್ಯೆಗೆ ಹೊರಟ ಕುರುಬರ ಕಂಬಳಿ!

POWER CITYNEWS :DHARWAD

ಧಾರವಾಡ : ಇಡೀ ಜಗತ್ತು ಕುತೂಹಲದಿಂದ ಅಯೋಧ್ಯಾ ಶ್ರೀ ರಾಮಮಂದಿರ ಉದ್ಘಾಟನೆಯನ್ನ ಕಾಯುತ್ತಿದೆ.
ಈ ಸುಸಂದರ್ಭದಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಭು ಶ್ರೀರಾಮನ ಪೂಜೆಗೆ ಕುರುಬರ ಕಂಬಳಿ ಹೋಗುತ್ತಿದೆ. ಹೌದು ಇಂತಹೊಂದು ಸಂತಸದ ವಿಷಯ ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತರುವಂತಿದೆ.

ಇದೇ ತಿಂಗಳು ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರ ಉದ್ಘಾಟನೆ ಆಗುತ್ತಿದೆ. ಮಂದಿರದ ಉದ್ಘಾಟನೆಗಾಗಿ ಧಾರವಾಡದ ಕಮಲಾಪುರ ಭಾಗದ ಪ್ರಗತಿಪರರು ಹಿರಿಯರು ಆಗಿರುವ ಸುಭಾಷ ಬಸಪ್ಪ ರಾಯಪ್ಪನವರ ಅವರು ಎರಡು ಕಂಬಳಿಗಳನ್ನು ರಾಮಮಂದಿರಕ್ಕೆ ಕೊಟ್ಟಿದ್ದಾರೆ.

ವಿಶ್ವ ಹಿಂದೂ ಪರಿಷತನ ಹಿರಿಯರಾಗಿರುವ
ಡಾ.ಎಸ್. ಆರ ರಾಮನಗೌಡರ ಹಾಗೂ ಮಾಜಿ ಮಹಾಪೌರರು ಆಗಿರುವ ಈರೇಶ ಅಂಚಟಗೇರಿ ಅವರಿಗೆ ಕಂಬಳಿಗಳನ್ನು ನೀಡಿದ್ದು, ಆ ಕಂಬಳಿಗಳನ್ನು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಶ್ರೀ ಪ್ರಲ್ಹಾದ ಜೋಶಿಯವರ ಮೂಲಕ ಪೂಜೆಯ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಗೆ ಶ್ರೀರಾಮನ ಉದ್ಘಾಟನೆ ಪೂಜೆಗೆ ಕಂಬಳಿಗಳನ್ನು ಬಳಸುವುದರಿಂದ ಉತ್ತರ ಕರ್ನಾಟಕದ ಕೊಡುಗೆ ಕೊಟ್ಟಂತೆ ಆಗಿದೆ.

ರಾಮನ ಪೂಜೆಯಲ್ಲಿ ಕಂಬಳಿಗಳ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕವರಿಗೆ ವಿಶ್ವಹಿಂದೂಪರಿಷತನ ಹಿರಿಯರು ಕಂಬಳಿಗಳನ್ನ ಹಸ್ತಾಂತರಿಸಿಕೊಂಡು ಶುಭ ಹಾರೈಸಿದ್ರು.
ಈ ಸಂದರ್ಭದಲ್ಲಿ ಸೋಮಶೇಖರಗೌಡ ಪಾಟಿಲ, ಗುರುನಾಥ ಹೊನ್ನನ್ನವರ,ಮಲ್ಲೇಶಿ ಶಿಂಧೆ. ಈರಯ್ಯ ರಾಚಯ್ಯನವರ್, ಗುಮ್ಮಗೋಳ, ಸೋಮು ಮಟ್ಟಿ, ಮಹಾಂತೇಶ ಅಂಕಲಿಮಠ,ಈರಪ್ಪ ಗೌಡಪ್ಪನವರ, ಎಲ್ಲಪ್ಪ‌ ಹೊಟ್ಟಿ , ಉಳವಪ್ಪ ಅನಾಡ, ಚಂದ್ರು ಗುಮಗೋಳಮಠ, ಮುರುಗೇಶ ಬಾಳಗಿ,
ಈರಯ್ಯ ರಾಮಯ್ಯನವ,ಬಸು ಬಾಳಗಿ, ನಿರ್ಮಲ ಕನ್ನಿನಾಯ್ಕರ ಹಾಗೂ ಸ್ಥಳೀಯರು ಹಿರಿಯರು, ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button