BREAKING NEWSCITY CRIME NEWSTWINCITY

City Crime News

POWER CITYNEWS : BANGLORE/HUBLI.

ಹುಬ್ಬಳ್ಳಿ/ ಬೆಂಗಳೂರು : ಯುವಕನೊರ್ವನ ಕೊಲೆಯೊಂದರ ಆರೋಪಕ್ಕೆ ಸಂಭಂದಪಟ್ಟಂತೆ ಸ್ಯಾಂಡಲ್‌ವುಡ್ ನಟ ದರ್ಶನ ಅವರನ್ನು ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಮೈಸೂರಿನ ಪಾರ್ಮಹೌಸ್‌ ಬಳಿಯ ಜಿಮ್‌ ‌ನಲ್ಲಿ ಬಂದಿಸಲಾಗಿದೆ.

ಹೌದು ಮೃತ ಯುವಕ ಕಳೆದ ಶನಿವಾರದಂದು ಅಪರಚಿತರ ಜೊತೆ ಬೆಂಗಳೂರು ಕಡೆಹೊಗಿದ್ದ ಚಿತ್ರದುರ್ಗ ಮೂಲದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯ ನಿವೃತ್ತ ಬೆಸ್ಕಾಂ ಅಧಿಕಾರಿ ಶಿವನಗೌಡ ಹಾಗೂ ರತ್ನಪ್ರಭಾ ಎಂಬುವವರ ಮಗ ರೇಣುಕಾ ಸ್ವಾಮಿ ಎಂದು ಗುರುತಿಸಲಾಗಿದ್ದು. ಆತ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದ. ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ ಆಪ್ತರಾದ ಪವಿತ್ರಾ ಗೌಡರ ಕುರಿತು ಸಾಮಾಜಿಕ ಜಾಲತಾಣದ ಪೊಸ್ಟ್ ‌ಗಳಿಗೆ ಅಸಹ್ಯವಾಗಿ ಅಶ್ಲೀಲ ಪದಬಳಕೆ ಮಾಡುತ್ತಿದ್ದ ಎನ್ನಲಾಗಿದ್ದು. ಇ ಹಿನ್ನೆಲೆಯಲ್ಲಿ ಯುವಕನ ಮೇಲೆ ದರ್ಶನ ಬೆಂಬಲಿಗರು ವಿನಯ್ ಎಂಬುವವನ ಶೆಡ್ಡಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ನಂತರ ಕೊಲೆಪಾತಕರು ಮೃತ ದೇಹವನ್ನು ಕಾಮಾಕ್ಷಿ ಪಾಳ್ಯದ ರಸ್ತೆ ಪಕ್ಕದ ರಾಜ ಕಾಲವೆಯ ಮೊರಿಯಲ್ಲಿ ಎಸೆಯಲಾಗಿತ್ತು. ಕಾಮಾಕ್ಷಿ ಪಾಳ್ಯದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಇ ಕುರಿತು ಕಾಮಾಕ್ಷಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದ್ರೆ ಕೊಲೆಯ ಕುರಿತು ಸಮೀಪದ ಅಪಾರ್ಟ್‌ಮೆಂಟ್ ಒಂದರ ಸೆಕ್ಯೂರಿಟಿ ಗಾರ್ಡ್ ನೀಡಿದ ದೂರಿನನ್ವಯ ಕೊಲೆಯ ಜಾಡು ಬೆನ್ನು ಹತ್ತಿದ್ದ ಪೊಲೀಸರಿಗೆ ನಿನ್ನೆ ಸಾಯಂಕಾಲ ಬೆಂಗಳೂರಿನ ಗಿರಿನಗರದ ಕೆಲವರು ಕೊಲೆ ನಾವೆ ಮಾಡಿದ್ದು ಎಂದು ಕಾಮಾಕ್ಷಿ ಪಾಳ್ಯದ ಪೊಲೀಸರಿಗೆ ಶರಣಾಗಿದ್ದರು. ಇ ಹಿನ್ನೆಲೆಯಲ್ಲಿ ಕೊಲೆಗೆಡುಕರನ್ನು ತೀವ್ರ ವಿಚಾರಣೆ ನಡೆಸಿ ಸತ್ಯಾ ಸತ್ಯತೆಯನ್ನು ಪೊಲೀಸರು ಬಾಯಿ ಬಿಡಿಸಿದ್ದಾರೆ.
ಕೊಲೆಪಾತಕರ ಮಾಹಿತಿಯಂತೆ ಇಂದು ಬೆಳಿಗ್ಗೆ ಮೈಸೂರಿನ ಫಾರ್ಮಹೌಸ್‌ನಲ್ಲಿದ್ದ ನಟ ದರ್ಶನ ಅವರನ್ನು ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಬಂದಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.

ಇದೀಗ ನಟ ದರ್ಶನ,ಪವಿತ್ರಾ ಗೌಡ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಜನರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button