Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSDHARWADGadagHubballi

ಪತ್ರಕರ್ತ ರಾಜು ಅಂಗಡಿ ಇನ್ನಿಲ್ಲ!

Dakhani

POWER CITYNEWS:HUBLI

ಧಾರವಾಡ : ಕೊಪ್ಪಳ ಜಿಲ್ಲೆಯ ಟಿವಿ5 ಸಂಸ್ಥೆಗೆ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಧಾರವಾಡದ ಯುವ ಪತ್ರಕರ್ತ ರಾಜು ಅಂಗಡಿ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವಳಿನಗರದ ವಿವಿಧ ಸುದ್ದಿ ಮಾಧ್ಯಮಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಕ್ಯಾಮೆರಾಮನ್ ಆಗಿ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಎಳೆಂಟು ತಿಂಗಳಿನಿಂದ ಕನ್ನಡದ ಹೆಸರಾಂತ ಸುದ್ದಿವಾಹಿನಿ ಟಿವಿ5 ಸಂಸ್ಥೆಗೆ ಕೊಪ್ಪಳ ಜಿಲ್ಲಾ ಕ್ಯಾಮೆರಾಮನ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೆ ಅನಾರೊಗ್ಯದಿಂದ ಬಳಲುತ್ತಿದ್ದ ಪತ್ರಕರ್ತ ರಾಜು ಅಂಗಡಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆಯಿಂದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದ ಹಿನ್ನೆಲೆಯಲ್ಲಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಕನಸೊಂದನ್ನ ಹೊತ್ತು ಬಂದಿದ್ದ 28ರ ಯುವಕ ರಾಜು ಅವರು ಅಲ್ಪಾವಧಿಗೆ ಇಹಲೋಕ ತೈಜಿಸಿರುವುದು ಆತ್ಮೀಯ ವಲಯದಲ್ಲಿ ಇನ್ನಿಲ್ಲದ ನೋವು ತರಿಸಿದೆ. ಕುಟುಂಬಕ್ಕೆ ಇವರೆ ಆಧಾರ ಸ್ಥಂಬವಾಗಿದ್ದು ವೃದ್ಧ ತಂದೆ ತಾಯಿ ಮಕ್ಕಳು ಮಡದಿ ಸೇರಿದಂತೆ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಮೃತರ ಅಂತ್ಯಕ್ರಿಯೆ ನೆರೆವೆರಿಸುವ ಮಾಹಿತಿ ಇದೆ.

Related Articles

Leave a Reply

Your email address will not be published. Required fields are marked *