ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಸತತ ಸುರಿಯುವ ಮಳೆಗೆ ಮನೆಗೋಡೆ ಕುಸಿತ: ಅಧಿಕಾರಿಗಳ ನಿರ್ಲಕ್ಷ!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು. ಕಳೆದ ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದರ ಗೋಡೆ ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಕುಟುಂಬ ವೊಂದು ಬಿದೀಗೆ ಬಂದಿದೆ. ಘಟನೆ ನಡೆದು ಎರಡ್ಮೂರು ದಿನಗಾಳದರೂ, ಯಾವೊಬ್ಬ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳು ಸಹ ಇತ್ತ ಗಮನ ಹರಿಸಿಲ್ಲ.

ಮನೆಯ ವಾಸ್ತವಿಕ ಸ್ಥಿತಿ!

ಹೌದು.. ಬಡ ಜನರ ಮನೆಗಳು ಧರೆಗುರಿಳಿದಾಗ ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ನಡೆದರೂ ಕೂಡ ಅದು ಫಲ ನಿಡುವುದಿಲ್ಲ. ಇತ್ತ ಪಾಲಿಕೆಯ ಜನಪ್ರತಿನಿಧಿಗಳು ಕೂಡ ಮಳೆಯಿಂದ ಮನೆ ಕಳೆದುಕೊಂಡವರ ಕಷ್ಟವನ್ನು ಕೇಳುತ್ತಿಲ್ಲ. ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ 81ರಲ್ಲಿ ಬರುವ ಸೆಟ್ಲಮೆಂಟ್ ಏಳನೇ ಅಡ್ಡ ರಸ್ತೆಯಲ್ಲಿರುವ ಗಂಗಾಧರನಗರದ ನಿವಾಸಿಗಳಾದ ಶಾಂತಾ ಪರಶುರಾಮ ಅಮ್ಮಿನಭಾವಿ ಎಂಬುವವರ ಮನೆ ನೆಲಕ್ಕೆ ಉರುಳಿದ್ದರೂ ಯಾವೊಬ್ಬ ಅಧಿಕಾರಿ ಕೂಡ ಸಹಾಯಕ್ಕೆ ಬಾರದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.

ಇನ್ನೂ ಸುರಿಯುತ್ತಿರುವ ಮಳೆಗೆ ಅದೆಷ್ಟೋ ಜನರು ಮನೆ ಕಳೆದುಕೊಂಡಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸೂಕ್ತ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button