CITY CRIME NEWSDAVANGEREಚಿತ್ರದುರ್ಗ

ಮಕ್ಕಳತ್ತ ಕತ್ತರಿ ಎಸೆದ ತಂದೆ : ಮಗ ಮಸಣಕ್ಕೆ! ತಂದೆ ಜೈಲಿಗೆ!

Chitrdurga murder !

POWERCITY NEWS : CHITRADURGA/HUBBALLI

ಹುಬ್ಬಳ್ಳಿ/ಚಿತ್ರದುರ್ಗ:ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ
ಮನೆಯಲ್ಲಿ ಟಿವಿ ರಿಮೋಟ್‌ಗಾಗಿ ಮನೆಯಲ್ಲಿ ಅಣ್ಣ-ತಮ್ಮಂದಿರಿಬ್ಬರು ಅಣತಿ ದೂರದಲ್ಲೆ ಮಲಗಿದ್ದ ಅನಾರೋಗ್ಯ ಪೀಡಿತ ತಂದೆ ಇವರಿಬ್ಬರ ಕಿತ್ತಾಟ ಆಡುವುದನ್ನು ನೋಡಿ ಮಲಗಿದ್ದಲ್ಲೆ ಅನೇಕ ಬಾರಿ ಮಕ್ಕಳ ನ್ನು ಕೂಗಿದ್ದಾನೆ ಆದರೆ ತಂದೆ ಮಾತಿಗೆ ಕಿವಿಗೂಡದೆ ತಮ್ಮ ಜಗಳ ಮುಂದೆವರೆಸಿದ್ದಾರೆ. ಇದರಿಂದ ಕೊಪ ಗೊಂಡ ತಂದೆ ತನ್ನ ಮಕ್ಕಳ ಕಡೆಗೆ ಕತ್ತರಿಯನ್ನು ಎಸೆದಿದ್ದಾನೆ.ಇದರಿಂದ ಕತ್ತರಿ ನೇರವಾಗಿ ಹಿರಿಯ ಮಗನ ಕುತ್ತಿಗೆಗೆ ಸಿಲುಕಿ ನಡೆಯಬಾರದ ಘಟನೆ ನಡೆದು ಹೋಗಿದೆ. ಕತ್ತರಿ ಏಟಿಗೆ ಸ್ಥಳದಲ್ಲಿಯೇ ರಕ್ತಸ್ರಾವ ಉಂಟಾಗಿ ಮಗ ಸಾವನ್ನಪ್ಪಿದ್ದಾನೆ.

ಮೃತ ಬಾಲಕನನ್ನು ಚಂದ್ರಶೇಖರ್ (16) ಎಂದು ಗುತುತಿಸಲಾಗಿದೆ. ಮೃತ ಬಾಲಕ ಚಂದ್ರಶೇಖರ್‌ನೊಂದಿದೆ ಆತನ ತಮ್ಮ ಪವನ್ (14) ರಿಮೋಟ್ ಗಾಗಿ ಗಲಾಟೆ ಮಾಡಿಕೊಂಡಿದ್ದರು.

ಇನ್ನು ಮನೆಯಲ್ಲಿ ಪದೇ ಪದೆ ಟಿವಿ ರಿಮೋಟ್‌ಗಾಗಿ ಮಕ್ಕಳು ಕಿತ್ತಾಡುವುದನ್ನು ನೋಡಿದ ತಂದೆಯು, ಇಂದು ಸಿಟ್ಟಿಗೆದ್ದು ಕತ್ತರಿ ಎಸೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಇನ್ನು ಬಟ್ಟೆ ಕತ್ತರಿಸುವ ಕತ್ತರಿಯು ಭಾರವಾಗಿದ್ದು, ಕುತ್ತಿಗೆ ಹಾಗೂ ಕಿವಿ ಭಾಗಕ್ಕೆ ಚುಚ್ಚಿಕೊಂಡು ತೀವ್ರ ಹಾನಿಯಾಗಿರುತ್ತದೆ. ಇದರಿಂದ ಕೆಳಗೆ ಬಿದ್ದ ಬಾಲಕ ರಕ್ತ ಸ್ರಾವದಿಂದ‌ ದುರ್ಮರಣಕ್ಕೀಡಾಗಿದ್ದಾನೆ. ತಂದೆ ಲಕ್ಷ್ಮಣಬಾಬು ವಿರುದ್ಧ ಪುತ್ರನ ಹತ್ಯೆ ಆರೋಪ ವ್ಯಕ್ತವಾಗಿದೆ.
ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button