CITY CRIME NEWSDHARWADGadagHubballi

ಹಣ ಕೇಳಿದ್ದಕ್ಕೆ ಹೆಣ ಬಿಳುವಂತೆ ಹಲ್ಲೆ ನಡೆಸಿದ ಗೆಳೆಯ!

Freinds fighting !

POWERCITY NEWS :GADAG/HUBBALLI

ಗದಗ : ಮುದ್ರಣ ಕಾಶಿ ಗದಗನಲ್ಲಿ ಹಾಡಹಗಲೇ ಸಾರ್ವಜನಿಕವಾಗಿ ಗೆಳೆಯರಿಬ್ಬರ ಮಧ್ಯೆ ಉಂಟಾದ ಕಲಹ ವಿಕೋಪಕ್ಕೆ ಹೋಗಿ ಚಾಕು ಇರಿದ ಘಟನೆ ಗದಗ ನಗರದ ಶಹರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿನ ಬಿಎಸ್ಎನ್‌ಎಲ್ ಕಚೇರಿಯ ಬಳಿ ಇರುವ ದೀಪಾ ಇಡ್ಲಿ ಸೆಂಟರ್ ಎದುರುಗಡೆ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಸಾರ್ವಜನಿಕ ವಲಯವನ್ನೆ ತಲ್ಲಣಗೊಳಿಸಿದೆ.

ಸುನೀಲ ಹಾಗೂ ದೇವು ಎಂಬ ಗೆಳೆಯರ ಮಧ್ಯೆ ಹಣಕಾಸಿನ ವಿಷಯವಾಗಿ ಮಾತಿನ ಚಕ-ಮಕಿ ನಡೆದಿತ್ತು ಇ ವೇಳೆ ತಾಯಿಯನ್ನು ನಿಂಧಿಸಿದ್ದರಿಂದ ಕುಪಿತಗೊಂಡ ದೇವು ಸುನೀಲ್‌ ಎಂಬಾತನ ಹೊಟ್ಟೆ ಹಾಗೂ ಕಿವಿಗೆ ಹರಿತವಾದ ಆಯುಧದಿಂದ ಇರಿದು ಹಾಡಹಗಲೇ ಅಟ್ಟಹಾಸ ಮೆರೆದಿದ್ದಾನೆ. ಇದರಿಂದಾಗಿ ಸಾರ್ವಜನಿಕರಲ್ಲಿ ಕೆಲಕಾಲ ಆತಂಕಮೂಡಿಸಿತ್ತು.

ನಂತರ ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಗದಗ ಶಹರ ಠಾಣೆಯ ಪೊಲೀಸರು ಗಾಯಾಳು ಸುನೀಲ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಆರೋಪಿ ದೇವು ಎಂಬಾತನನ್ನು ವಶಕ್ಕೆ ಪಡೆದಿದು ತನಿಖೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button