BREAKING NEWSCITY CRIME NEWSDHARWADHubballiPoliceTWINCITY
ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ಒರ್ವನ ಬಂಧನ!
Posco act!

POWER CITYNEWS : HUBBALLI
ಹುಬ್ಬಳ್ಳಿ :ಅಪ್ರಾಪ್ತೆಯೊಂದಿಗೆ ಅಸಭ್ಯ ವರ್ತನೆ ತೊರಿದ ಘಟನೆಗೆ ಸಂಭಂದ ಪಟ್ಟಂತೆ ಅಶೋಕನಗರ ಪೊಲಿಸ್ ಠಾಣೆಯಲ್ಲಿ ಪೊಸ್ಕೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಅಶೊಕನಗರ ಪೊಲಿಸ್ ಠಾಣಾವ್ಯಾಪ್ತಿಯಲ್ಲಿನ ಕಿರಾಣಿ ಅಂಗಡಿಯೊಂದಕ್ಕೆ ಮೊಟ್ಟೆಗಳನ್ನು ಪೂರೈಸುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯೊರ್ವ ಅಂಗಡಿ ಮಾಲಿಕನ ಮಗಳೊಂದಿಗೆ ಕಳೆದ ಕೆಲವು ದಿನಗಳಿಂದ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.
ಇನ್ನೂ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುವ ಇ ವಿಷಯವನ್ನು ಅಪ್ರಾಪ್ತೆಯು ತನ್ನ ಪೊಷಕರಿಗೆ ತಿಳಿಸಿದ್ದಾಳೆ.ಇದರಿಂದ ಭಯಗೊಂಡ ಪಾಲಕರು ಅಶೊಕನಗರ ಪೊಲಿಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಆರೋಪಿಯನ್ನು ಬಂದಿಸಿದ ಪೊಲಿಸರು ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
