BREAKING NEWSCITY CRIME NEWSDHARWADHubballiPoliceTWINCITYಸ್ಥಳೀಯ ಸುದ್ದಿಹುಬ್ಬಳ್ಳಿ

ಹಳೆ ದ್ವೇಷಕ್ಕೆ ಹಲ್ಲೆ ನಡೆಸಿದ ಅಳಿಯ : ಸಾರ್ವಜನಿಕರ ಮೇಲೆ ಕಾರು ಹತ್ತಿಸಿದ ಮಾವ!

Public voilence!

POWER CITYNEWS : HUBBALLI

ಹುಬ್ಬಳ್ಳಿ

ಹಳೆ ದ್ವೇಶದ ಹಿನ್ನೆಲೆಯಲ್ಲಿ ಹಾಡಹಗಲೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ವಿದ್ಯಾನಗರದ ಪ್ರಮುಖ ಸಿಗ್ನಲ್ ಬಳಿ ನಡೆದಿದೆ.

ಇದೀಗ ಹಲ್ಲೆಗೊಳಗಾಗಿರುವ ವಿನೋದ ಬೊಂಗಾಳೆಯ ಪತ್ನಿ ಪ್ರಿಯಾ ಬೊಂಗಾಳೆ ನವನಗರದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಕಳೆದ ಅಗಸ್ಟ್ ತಿಂಗಳಲ್ಲಿ ಇದೆ ಬಟ್ಟೆ ವ್ಯಾಪರದ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು.

ಇನ್ನೂ ತನ್ನ ಅಕ್ಕನ ಸಾವಿಗೆ ಅಕ್ಕನ ಗಂಡನಾದ ವಿನೋದ ಬೊಂಗಾಳೆಯೆ ಕಾರಣ ಎಂದು ಆರೋಪಿಸಿ ನವನಗರದ ಠಾಣೆಯಲ್ಲಿ ಪ್ರೀಯಾ ಕುಟುಂಬಸ್ಥರು ದೂರು ನಿಡಿದ್ದರು. ಅಷ್ಟೇ ಅಲ್ಲದೆ ಅಂದು ಅವಳಿ ನಗರದ ಪೊಲಿಸ್ ಆಯುಕ್ತರ ಕಚೇರಿ ಗೂ ಭೆಟಿ ನೀಡಿ ಬೊಂಗಾಳೆ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದರು ಎನ್ನಲಾಗಿದೆ.

ಅದ್ರೆ ಇಂದು ಇದೆ ಹಳೆ ದ್ವೇಷದ ಹಿನ್ನೆಲೆಯಲ್ಲಿ I.10 ಕೆಂಪು ಬಣ್ಣದ ಕಾರಿನಲ್ಲಿ ಸಂಚರಿಸುತ್ತಿದ್ದ ವಿನೋದ ಬೊಂಗಾಳೆ ವಿದ್ಯಾನಗರದ ಶಿರೂರು ಪಾರ್ಕ ಮಾರ್ಗವಾಗಿ ಪಿಬಿ ರಸ್ತೆಯ ಸಿಗ್ನಲ್ ಬಳಿ ನಿಂತಿದ್ದಾರೆ. ಇ ವೇಳೆ ಸುಜುಕಿ ಆ್ಯಕ್ಸಸ್ ಸ್ಕೂಟರ್ ನಲ್ಲಿ ಬಂದಿದ್ದ ಎನ್ನಲಾದ ರಾಹುಲ್ ರೆನಕೆ ಕಾರಿನ ಬಳಿ ಬಂದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆದರೆ ಹಲ್ಲೆ ನಡೆಸಿದ ಸಂಧರ್ಭದಲ್ಲಿ ಕೂಗಾಡಿದ ವಿನೋದ ಬೊಂಗಾಳೆ ಯವರ ರಕ್ಷಣೆಗೆ ಸಂಚಾರಿ ಪೊಲೀಸರು ಧಾವಿಸಿದ್ದಾರೆ. ಇವೇಳೆಗೆ ಒಮ್ಮೆಲೆ ಕಾರಿನ ಎಕ್ಸಲೆಟರ್ ಒತ್ತಿದ ವಿನೋದ ಬೊಂಗಾಳೆ ಸಿಗ್ನಲ್ ನಲ್ಲಿ ನಿಂತಿದ್ದ ಇನ್ನಿತರ ವಾಹನ ಸವಾರರ ವಾಹನಗಳಿಗೆ ಹೊಡೆದ ಡಿಕ್ಕಿಯ ರಭಸಕ್ಕೆ ತಮ್ಮದಲ್ಲದ ತಪ್ಪಿಗೆ ಆಸ್ಪತ್ರೆಯ ಪಾಲಾಗ ಬೇಕಾಯ್ತು.

ಒಂದು ಕಡೆ ವಿನೋದ ಬೊಂಗಾಳೆ ಹಲ್ಲೆಯಿಂದ ಗಾಯಗೊಂಡರೆ ಮತ್ತೊಂದೆಡೆ ಬೊಂಗಾಳೆಯ ಅವಾಂತರಕ್ಕೆ ಐವರು ದಾರಿಹೊಕರು ಗಾಯಗೊಳ್ಳುವಂತಾಗಿದೆ.

ಇನ್ನೂ ಹಲ್ಲೆಯ ಕುರಿತು ವಿನೋದ ಬೊಂಗಾಳೆ ರಾಹುಲ್ ರೆನಕೆ ವಿರುದ್ದ ವಿದ್ಯಾನಗರ ಪೊಲಿಸ್ ಠಾಣೆಯಲ್ಲಿ ಹಲ್ಲೆ ಹಾಗೂ ಜೀವ ಬೆದರಿಕೆಯ ದೂರುನಿಡಿದ್ದಾರೆ. ಹಾಗಾದ್ರೆ ಬೊಂಗಾಳೆ ವಿರುದ್ದ ಸಂಚಾರಿ ಪೊಲಿಸರು ಕಾನೂನು ಕ್ರಮ ಜರುಗಿಸುತ್ತಾರಾ? ಎಂಬುದನ್ನ ಕಾದು ನೋಡಬೆಕಿದೆ.

Related Articles

Leave a Reply

Your email address will not be published. Required fields are marked *

Back to top button