ರಾಜಕೀಯಸ್ಥಳೀಯ ಸುದ್ದಿಹುಬ್ಬಳ್ಳಿ

ಉದ್ಯೋಗಸ್ಥ ಮಹೀಳೆಯರಿಗೆ ಚೆಕ್ ವಿತರಣೆ: ಶಾಸಕ ಅಬ್ಬಯ್ಯ

ಉದ್ಯೋಗಿನಿ ಯೋಜನೆಯಡಿ ಮಂಜೂರಾದ ಸಾಲ ಸೌಲಭ್ಯದ ಚೆಕ್ ವಿತರಣೆ

ಹುಬ್ಬಳ್ಳಿ: ರಾಜ್ಯ ಮಹಿಳಾ ಅಭಿವೃದ್ಧಿ ‌ನಿಗಮದಿಂದ ಮಹಿಳೆಯರ ಆರ್ಥಿಕ ಸ್ವಾವಲಂಭನೆಗಾಗಿ “ಉದ್ಯೋಗಿನಿ” ಯೋಜನೆಯಡಿ ಸ್ವ-ಉದ್ಯೋಗಕ್ಕಾಗಿ ನೀಡುವ 90 ಸಾವಿರ ರೂ. ಸಬ್ಸಿಡಿಯುಳ್ಳ 3 ಲಕ್ಷ ರೂ. ಮೊತ್ತದ ಸಾಲ ಸೌಲಭ್ಯದ ಚೆಕ್ ಅನ್ನು ರವಿವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಕ್ಷೇತ್ರದ 3 ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಹಿಳೆಯರು ಸರ್ಕಾರಿ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಸ್ವ- ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಭಿಗಳಾಗಿ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖಂಡ ಪ್ರಕಾಶ ಬುರಬುರೆ, ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ನಂದಿನಿ, ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button