Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಉಕ್ರೇನನಲ್ಲಿ ಸಾವಿಗೀಡಾದ ವಿದ್ಯಾರ್ಥಿ ಮೃತದೇಹ ಹುಟ್ಟೂರಿಗೆ.

ಹಾವೇರಿ

ಉಕ್ರೇನ್ ನಲ್ಲಿ ಮೃತನಾದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಮೃತದೇಹ ಇಂದು ಅವರ ನಿವಾಸಕ್ಕೆ ತಲುಪಿದೆ.

ಸುಮಾರು _20 ದಿನಗಳ ಬಳಿಕ ಮೃತದೇಹ
ಸ್ವಗ್ರಾಮಕ್ಕೆ ಬಂದಿದೆ.

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನವೀನ ಮೃತದೇಹ ನೋಡಲು ಜನಸಾಗರವೇ ಬಂದಿದೆ.

ನವೀನ್ ಅಂತಿಮ ದರ್ಶನಕ್ಕೆ ಚಳಗೇರಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ನವೀನ ಮೃತನಾದ ಸುದ್ದಿ ತಿಳಿದಾಗಿನಿಂದ ಮನೆ ಮಂದಿ ಮೃತದೇಹದ ಆಗಮನಕ್ಕೆ ಕಾದು ಕುಳಿತಿದ್ದರು.

ಇನ್ನು ಮೃತ ದೇಹ ಇಂದು ಊರಿಗೆ ಬೆಳಿಗ್ಗೆ ಬರುತ್ತೆ ಎನ್ನುವ ಸುದ್ದಿ ಅರಿತ ನವೀನ ತಾಯಿ ವಿಜಯಲಕ್ಷ್ಮಿ
ಮಗನ ಫೋಟೋಗೆ ಪೂಜೆ ಸಲ್ಲಿಸಿ ಭಾವುಕರಾಗಿ ಕಣ್ಣೀರು ಹಾಕಿದ್ರು.

ನವೀನ್ ಪಾರ್ಥಿವ ಶರೀರ ಊರಿಗೆ ಬರುತ್ತಿದ್ದಂತೆ, ಮೃತ ದೇಹಕ್ಕೆ ಪೂಜೆ ನೆರವೆರಿಸಿದ ಕುಟುಂಬ,
ಪೂಜಾ ವಿಧಾನ ಮುಗಿದ ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *