ಎಲ್ ಆ್ಯಂಡ್ ಕಂಪನಿ ಗುತ್ತಿಗೆ ಟೆಂಡರ್ ರದ್ದು ಪಡಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು- ಕೇಂದ್ರ. ಸಚಿವ ಪ್ರಹ್ಲಾದ ಜೋಶಿ ಎಚ್ಚರಿಕೆ
ಧಾರವಾಡ
ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅವರು ಎಲ್ ಆ್ಯಂಡ ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಹ್ಲಾದ ಜೋಶಿ ರವರ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಕುಡಿಯುವ ನೀರಿನ ಗುತ್ತಿಗೆದಾರರಾದ ಎಲ್&ಟಿ ಅಧಿಕಾರಿಗಳೊಂದಿಗೆ ಸಭೆಯು ಜರುಗಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ ಸಚಿವರು 3 ದಿನಗಳ ಗಡುವು ಕೊಟ್ಟರು.
ಅವಳಿನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಇರುವ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರು, ಎಲ್& ಟಿ ನ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಚಿವರು,
ಒಂದು ವಾರದೊಳಗೆ ನೀರಿನ ಸಮರ್ಪಕ ಪೂರೈಕೆ ಹಾಗೂ ನಿರ್ವಹಣೆ ಆಗದೇ ಇದ್ದಲ್ಲಿ, ಹಾಗೂ 3 ದಿನಗಳಲ್ಲಿ ಹಳೆಯ ನೌಕರರನ್ನು ಮರುನೇಮಕಾತಿ ಮಾಡದೇ ಇದ್ದಲ್ಲಿ, ಕಂಪನಿಯ ವಿರುದ್ದ ಕಠಿಣ ಕ್ರಮ ಕೈಗೊಂಡು, ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವಳಿನಗರದ ಗುತ್ತಿಗೆಯನ್ನು ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದರು. ಟೆಂಡರ್ ಪ್ರಕ್ರಿಯೆಗಳನ್ನು ಒಂದು ವಾರದೊಳಗೆ ಸಲ್ಲಿಸಲು ಕೇಂದ್ರ ಸಚಿವರು ಪಾಲಿಕೆಯ ಆಯುಕ್ತರಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಶಾಸಕರಾದ ಮಹೇಶ ಟೆಂಗಿನಕಾಯಿ ರವರು, ಉಪಮಹಾಪೌರರಾದ ಶ್ರೀಮತಿ ಉಮಾ ಮುಕುಂದ ರವರು, ಸಭಾನಾಯಕರಾದ ತಿಪ್ಪಣ್ಣ ಮಜ್ಜಿಗಿ ರವರು, ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ ರವರು, ಪಾಲಿಕೆಯ
ಸದಸ್ಯರಾದ ಶಿವು ಮೆಣಸಿನಕಾಯಿ ರವರು, ಬೀರಪ್ಪ ಖಂಡೆಕಾರ ರವರು, ಕೆ.ಯು.ಐ.ಡಿ.ಎಫ್. ಸಿ ನಾ ಅಧಿಕಾರಿಗಳಾದ ಮನಗೊಂಡ ರವರು, ಸ್ಮಾರ್ಟ್ ಸಿಟಿ ನ ಅಧಿಕಾರಿಗಳಾದ ಶ್ರೀಮತಿ ಪ್ರಿಯಾಂಕಾ ರವರು, ಹಾಗೂ ಎಲ್&ಟಿ ನ ಅಧಿಕಾರಿಗಳು ಉಪಸ್ಥಿತರಿದ್ದರು.