ರಾಜಕೀಯರಾಜ್ಯಸ್ಥಳೀಯ ಸುದ್ದಿ

ನನ್ನ ವಿರುಧ್ದ ಪೋಲಿಸರ ಮೂಲಕ ಷಡ್ಯಂತ್ರ: ಚೇತನ್!

Power city news: ಹುಬ್ಬಳ್ಳಿ

ಅವಳಿನಗರದ ಪಾಲಿಕೆ ಸದಸ್ಯನನ್ನು ಕಳೆದ ತಿಂಗಳ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆಯಲ್ಲಿ ಪೊಲಿಸರು ಗುಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಅಟ್ಟಲಾಗಿತ್ತು.

ಚುನಾವಣಾ ನಂತರದಲ್ಲಿ ಕಾರಾಗೃಹದಿಂದ ಬಿಡುಗಡೆಗೊಂಡ ಚೇತನ್ ಹಿರೆಕೆರೂರ ಪತ್ರಿಕಾ ಸುದ್ದಿ ಗೋಷ್ಠಿಯಲ್ಲಿ ನಡೆಸಿ ನಾನು ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ52ರಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು ಪರಾಜಿತಗೊಳಿಸಿ ಪಕ್ಷೇತರ ಅಭ್ಯರ್ಥಿಯಾಗಿ ಚುಣಾಯಿತನಾಗಿದ್ದು. ಆದರೆ ಇದೀಗ ನನ್ನ ರಾಜಕೀಯ ಬೆಳವಣಿಗೆ ಸಹಿಸದ ಕೆಲ ಪಟ್ಟಬದ್ದ ಹಿತಾಸಕ್ತಿಗಳು ನನ್ನ ಮೇಲೆ ನಿರಂತರ ಷಡ್ಯಂತರ ರಚಿಸುತ್ತಿದೆ.

ಅದರಂತೆ ಅವಳಿನಗರದ ಪೊಲಿಸ್ ಇಲಾಖೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಾಕ್ಷಿ ಅಧಾರಗಳೇ ಇಲ್ಲದೆ ಆರೋಪ ಹೊರಿಸಿ ನನ್ನ ಮೇಲೆ ದೌರ್ಜನ್ಯ ವೆಸಗುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಕಳೆದ ದಶಕಗಳಲ್ಲಿ ನನ್ನ ವಿರುದ್ಧ ಈ ವರೆಗೂ (2010ರಿಂದ2023)13 ಪ್ರಕರಣಗಳನ್ನು ದಾಖಲಾಗಿದ್ದವು. ಅವುಗಳ ಪೈಕಿ ಇನ್ನೂ ಕೇವಲ 3 ಪ್ರಕರಣಗಳು ಮಾತ್ರ ನ್ಯಾಯಾಲಯದಲ್ಲಿ ಬಾಕಿ ಇವೆ.ಅದರಲ್ಲಿ ಒಂದು ಪ್ರಕರಣ ಇನ್ನೂ ಕೂಡ ನ್ಯಾಯಾಂಗ ವಿಚಾರಣೆ ಹಂತದಲ್ಲಿದೆ ಹೀಗಿರುವಾಗ.

ನಾನು ಕಾನೂನು ಬಾಹಿರವಾಗಿ ಯಾವುದೇ ಮೀಟರ್‌ ಬಡ್ಡಿ ದಂಧೆಯಾಗಲಿ,ಇಸ್ಪೀಟ್ ದಂಧೆಯಾಗಲಿ,”ಭೂ” ಮಾಫಿಯಾ,ಅಥವಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಯಾವುದೇ ಅಕ್ರಮ ಚಟುವಟಿಕೆಗಳಲ್ಲಾಗಲಿ ನಾನು ಭಾಗಿ ಇಲ್ಲ ಎಂದು ಪೊಲಿಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದೆ ವೇಳೆ ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿ ಇತ್ತೀಚನ ದಿನಗಳಲ್ಲಿ ಪೊಲಿಸ್ ಕಾರ್ಯವೈಖರಿಯನ್ನು ನೋಡಿದರೆ ಕಳೆದ ಬಿಜೆಪಿ ಸರ್ಕಾರದ ಮುಖಂಡರ ಅಣತಿಯಂತೆ ಅವಳಿನಗರದ ಪೊಲಿಸ್ ಕೆಲಸ ಮಾಡುತ್ತ ಬಂದಿದೆ.

ಇನ್ನೂ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ವಾರ್ಡ್ ಸಂಖ್ಯೆ 52ರ ಪಾಲಿಕೆ ಸದಸ್ಯ ಚೇತನ ಹಿರೆಕೆರೂರ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪ್ರಚಾರದ ವೇಳೆ ಸನ್ಮಾಸಿ ಬೆಂಬಲ ಸೂಚಿಸಿದ್ದ ದಿನದಂದೇ ರಾಜಕೀಯ ಹಗೆ ಸಾಧಿಸಿದ ಕೆಲವರು ಪೊಲಿಸರ ಮೇಲೆ ಒತ್ತಡ ಹೇರಿದ್ದರಿಂದ ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾಗಿಲ್ಲ ಎಂದು ಪೊಲಿಸ್ ಅಧಿಕಾರಿಗಳಿಗೆ ಗೊತ್ತಿದ್ದರು ಸಹ ನಿರಾಧಾರವಾಗಿ ಅವಳಿನಗರದ ಪೊಲಿಸರು ಚೇತನ್ ಅವರನ್ನು ಬಂದಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಧಾರವಾಡ ಭಾಗದ ಕರ್ನಾಟಕ ಉಚ್ಛನ್ಯಾಯಾಲಯ ಧಾರವಾಢ ಪೀಠವು ಅವಳಿನಗರದ ಪೊಲಿಸರಿಗೆ ಈಗಾಗಲೇ ಛೀಮಾರಿ ಹಾಕಿದೆ ಎಂದರು.ಇನ್ನುಳದಂತೆ ಬಿಜೆಪಿ ನಾಯಕರು ಪೊಲಿಸ್ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರ ಕುರಿತು ಸಾಕಷ್ಟು ಸಾಕ್ಷ್ಯಾಧಾರ ನಮ್ಮಲ್ಲಿವೆ ಅವುಗಳನ್ನು ಮುಂಬರುವ ದಿನಗಳಲ್ಲಿ ಮಾಧ್ಯಮಗಳ ಎದುರು ಬಹಿರಂಗ ಗೊಳಿಸುತ್ತೇವೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button