Jannah Theme License is not validated, Go to the theme options page to validate the license, You need a single license for each domain name.
DHARWADKalghatagiL&TPolicePolitical newsTWINCITYಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಗುಜರಿ ಅಂಗಿಡಿಗೆ ಆಕಸ್ಮಿಕ ಬೆಂಕಿ

rajadakhani

power citynews :hubballi

ಹುಬ್ಬಳ್ಳಿ : ಗುಜರಿ ಅಂಗಡಿಯೊಂದಕ್ಕೆ ಬೆಂಕಿ ಹೊತ್ತಿದ ಪರಿಣಾಮ ಶಡ್ ನಲ್ಲಿದ್ದ ಗುಜರಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಇಲ್ಲಿನ ಚನ್ನಪೇಟೆಯ ಅಂಬೇಡ್ಕರ್ ನಗರದ ಜೆಕೆ ಇಂಡಸ್ಟ್ರೀಸ್‌ ನಲ್ಲಿ ನಡೆದಿದೆ.

ಇಲ್ಲಿ ಐದಾರು ಗುಜರಿ ಕಾರ್ಮಿಕರು ಶಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲವಾದರೂ. ದೊಡ್ಡ ಪ್ರಮಾಣದಲ್ಲಿ ಇರಿಸಲಾಗಿದ್ದ ಗುಜರಿ ವಸ್ತುಗಳಿಗೆ, ಅದ್ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿತು ಎನ್ನುವ ಮಾಹಿತಿ ಇದುವರೆಗೂ ಅಂಗಡಿ ಮಾಲಿಕನ ಅರಿವಿಗೂ ಇಲ್ಲ ಎನ್ನಲಾಗಿದೆ. ಅದೃಷ್ಟ ವಶಾತ್ ಯಾವುದೆ ಸಾವು ನೋವುಗಳ ಸಂಭವಿಸಿರುವ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.

ಇನ್ನೂ ಬೆಂಕಿ ಬಿದ್ದ ಪರಿಣಾಮವಾಗಿ ದಟ್ಟನೆಯ ಬೆಂಕಿಯೊಂದಿಗೆ ಹೊಗೆಯೂಕೂಡ ಶೆಡ್ ಸಂಪೂರ್ಣ ಆವರಿಸಿಕೊಂಡಿದೆ. ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕದಳದ ಸಿಬ್ಬಂದಿಗಳು ಅಗ್ನಿ ನಂದಿಸುವಲ್ಲಿ ಕಾರ್ಯನಿರತವಾಗಿದ್ದಾರೆ.

ಇದೀಗ ಗುಜರಿ ಹೊಂದಿಕೊಂಡಂತೆ ಅನೇಕ ಅಂಗಡಿ ಮುಗ್ಗಟ್ಟುಗಳಿದ್ದು ಅವುಗಳ ಮಾಲಿಕರು ಕೂಡ ಆತಂಕದಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಗುಜರಿ ವಿಲೇವಾರಿಗೊಂಡರೆ ಇಂತಹ ಅಹಿತಕರ ಘಟನೆಗಳು ಸಂಭವಿಸುವುದನ್ನ ತಡೆಗಟ್ಟಬಹುದು. ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Related Articles

Leave a Reply

Your email address will not be published. Required fields are marked *