Jannah Theme License is not validated, Go to the theme options page to validate the license, You need a single license for each domain name.
ಬೆಂಗಳೂರು

ರಾಜೇಂದ್ರ ಗೋಖಲೆ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು:

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಖಲೆ ಅವರು ,ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದರು. ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ತಿನ ಪೂರ್ಣ ಅವಧಿ ಕಾರ್ಯಕರ್ತರಾಗಿದ್ದ, ಗೋಖಲೆ ಅವರು

ಪುಣೆಯಲ್ಲಿ ಇಂದು ನಸುಕಿನ ಜಾವ ತೀರಿಕೊಂಡಿದ್ದಾರೆ.

ನನ್ನ ಆತ್ಮೀಯ ಮಿತ್ರ ಹಾಗೂ ಒಬ್ಬ ಹಿರಿಯ ಸಂಘಟನಾಕಾರರು ಆದ ರಾಜೇಂದ್ರ ಗೋಖಲೆ ಅವರ ಅಕಾಲಿಕ ಮರಣ ನನಗೆ ಬಹಳ ದೊಡ್ಡ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಗೋಖಲೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ. ರಾಜೇಂದ್ರ ಗೋಖಲೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *