ಸ್ಥಳೀಯ ಸುದ್ದಿ
ರಂಜಾನ ಹಬ್ಬದ ಶುಭಾಶಯ ಕೋರಿದ ಹೇಮಂತ ವಿನಯ ಕುಲಕರ್ಣಿ

ಧಾರವಾಡ
ಇಂದು ರಂಮಜಾನ ಹಬ್ಬದ ಪ್ರಯುಕ್ತ ನಡೆದ ಪ್ರಾರ್ಥನೆಯಲ್ಲಿ, ಶ್ರೀ ವಿನಯ ಕುಲಕರ್ಣಿಯವರ ಸುಪುತ್ರ ಹೆಮಂತ ಕುಲಕರ್ಣಿಯವರು ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೇಮಂತ ಕುಲಕರ್ಣಿಯವರು,ಎಲ್ಲ ಬಾಂಧವರು ಸುಮಾರು ಒಂದು ತಿಂಗಳ ಉಪವಾಸ ಮಾಡಿ,ಸಕಲ ಜೀವರಾಶಿಗೆ ಸುಖವಾಗಲೆಂದು ಬಯಸಿ ಪ್ರಾರ್ಥನೆ ಮಾಡಿದ ಎಲ್ಲ ಬಾಂಧವರಿಗೂ ಶುಭವಾಗಲಿ ಎಂದರು.
ನಮ್ಮ ತಂದೆಯ ಅನುಪಸ್ಥಿತಿಯಲ್ಲಿ ನಮ್ಮ ಕುಟುಂಬ ಚುನಾವಣೆ ಎದುರಿಸುತ್ತಿದ್ದು ತಮ್ಮೆಲ್ಲ ಸಹಕಾರ ನಮ್ಮೊಂದಿಗಿರಲಿ. ತಮ್ಮ ಬೆಂಬಲ ನಮ್ಮ ತಂದೆಗಿರಲಿ ಎಂದು ವಿನಂತಿಸಿಕೊಂಡರು.
ಈ ಸಂಧರ್ಭದಲ್ಲಿ ಮುಸ್ಲಿಂ ಹಿರಿಯರಾದ ಡಾ- ಇಕ್ಬಾಲ ಶೇಖ,ಇಕ್ಬಾಲ ಜಮಾದಾರ,ನಜೀರ ಮನಿಯಾರ,ಶಫಿ ಕಳ್ಳಿಮನಿ,ಮೈನುದ್ದೀನ ನಧಾಪ,ನಿಜಾಮ ರಾಹಿ,ಬಸೀರ ಹಾಲಬಾವಿ,ಸಯ್ಯದಗೌಸ ಕೊರಪಾಲಿ,ಬಸೀರ ಗಜೇಂದ್ರಗಡ ಮುಂತಾದವರು ಉಪಸ್ಥಿತರಿದ್ದರು.