BREAKING NEWSCITY CRIME NEWSDHARWADGood jobHubballiL&TLife StyleTechTWINCITY

“ಮಾಧ್ಯಮ”ಕ್ಕೆ ಸಾಕಷ್ಟು ಮಹತ್ವವಿದೆ :ಶಾಕೀರ ಸನದಿ..!

DAKHANI

POWER CITYNEWS:HUBBALLI/ಹುಬ್ಬಳ್ಳಿ ಮಾಧ್ಯಮಕ್ಕೆ ಯಾವತ್ತೂ ಸವಾಲು ಇರಬಾರದು. ಆದರೆ, ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಸವಾಲುಗಳು ಯಥೇಚ್ಛವಾಗಿ ಕಾಡಬೇಕು. ಜನರು ಓದುವ ಸುಖ ಬಯಸಬೇಕೇ ಹೊರತು. ಮನೋರಂಜನೆಗಾಗಿ ಮಾಧ್ಯಮವನ್ನು ಬಳಸಬಾರದು ಎಂದು ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಹೇಳಿದರು.


ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿಯ ಜೆ.ಸಿ. ನಗರದ ಮುನ್ಸಿಪಲ್ ಎಂಪ್ಲಾಯೀಸ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮ ಉದ್ಯಮವಾದ ನಂತರ ಬೆಳಕು ಕತ್ತಲಾಗುತ್ತಿದ್ದು, ಕತ್ತಲಿಗೆ ಬಣ್ಣ ಬಳಿಯುವ ಕಾರ್ಯವಾಗುತ್ತಿದೆ. ನಿನಗಿದ್ದರೆ ನನಗೆ, ನನಗಿದ್ದರೆ ನಿನಗೆ ಎಂಬ ಸೂತ್ರದಡಿಗೆ ಮಾಧ್ಯಮ ಕ್ಷೇತ್ರ ಬಂದು ನಿಂತಿದೆ. ಯಾಮಾರಿಸುವ ವೃತ್ತಿಪರತೆ ವಿರುದ್ಧ ನಮ್ಮ ಓದುಗರು ಚಕಾರ ಎತ್ತುತ್ತಿಲ್ಲ. ಜವಾಬ್ದಾರಿ ಇಲ್ಲದ ಸಮಾಜದಲ್ಲಿ ಬೇಜವಾಬ್ದಾರಿ ರಾರಾಜಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.


ನಾನ ಹುಡಾ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಮುದ್ರಣ ಮಾಧ್ಯಮಕ್ಕೆ ಸಾಕಷ್ಟು ಮಹತ್ವವಿದೆ. ಹಿಂದಿನ ಪತ್ರಿಕೋದ್ಯಮಕ್ಕೂ ಪ್ರಸ್ತುತಕ್ಕೂ ಅಜಗಜಾಂತರವಿದೆ. ಮುದ್ರಣ ಮಾಧ್ಯಮದ ಮೇಲೆ ಜನರಿಗೆ ಇಂದಿಗೂ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮೊದಲು ಸಿಎ ಸೈಟ್‌ನಲ್ಲಿ ಬಡವರಿಗೆ ಶೇ. 5ರಷ್ಟು ಮೀಸಲಾತಿ ಇತ್ತು. ಸದ್ಯ ಸ್ಥಗಿತಗೊಂಡಿದೆ. ಮರು ಚಾಲನೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದು ನಿವೇಶನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸನತ್‌ಕುಮಾರ ಬೆಳಗಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಸುನೀತಾ ರವೀಂದ್ರ
ಕುಲಕರ್ಣಿ ಹಾಗೂ ನಿರ್ಮಲಾ ಕುದರಿ ಅವರಿಗೆ ಅವ್ವ ಪತ್ರಕರ್ತೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ವಿಜಯವಾಣಿ’ಯ ಹಿರಿಯ ವರದಿಗಾರ ಮರಿದೇವ ಹೂಗಾರ ಸೇರಿದಂತೆ ಹಲವರಿಗೆ ವಿವಿಧ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *