ಧಾರವಾಡ

ಸಂತೋಷ್ ಲಾಡ್ ಅವರ ಅಂಬ್ಯೂಲೆನ್ಸ ‌ಕೊಡ್ತು.. ಅಲರ್ಜಿ ಭಾಗ್ಯ…

ಧಾರವಾಡ

ಕಲಘಟಗಿ ಮತಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯದ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಅನುಭವಿಸಿದವರು ಶ್ರೀ ಸಂತೋಷ ಲಾಡ್.

ಬಳ್ಳಾರಿ ಜಿಲ್ಲೆಯ ಸಂಡೂರಿ ನಿಂದ ಬಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಸಚಿವರಾಗಿ ಅಧಿಕಾರ ಅನುಭವಿಸಿದವರು ಸಂತೋಷ ಲಾಡ್.

ಆದ್ರೆ ಇದೀಗ ಮಾಜಿ ಶಾಸಕರು ಆಗಿರುವ

ಸಂತೋಷ ಲಾಡ ಅವರ ಅಂಬ್ಯೂಲೆನ್ಸ ಸುದ್ದಿ ಸೊಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಲಘಟಗಿ ಮತಕ್ಷೇತ್ರದ ಜನರಿಗೆ ಅನುಕೂಲವಾಗಲು 4 ಗ್ರಾಮ ಪಂಚಾಯತಗೆ ಒಂದರಂತೆ ಅಂಬ್ಯೂಲೆನ್ಸ ಗಿಫ್ಟ್ ಕೊಟ್ಟಿದ್ದರು ಮಾಜಿ ಸಚಿವರಾದ ಸಂತೋಷ್ ಲಾಡ್.

ಆದ್ರೆ ಇದೇ ಅಂಬ್ಯೂಲೆನ್ಸನಲ್ಲಿ ಚಿಕೆತ್ಸೆ ಪಡೆದುಕೊಂಡಿದ್ದ ನಿಗದಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಇದೀಗ ಸ್ಕಿನ್ ಅಲರ್ಜಿ ಆಗಿದೆ.

2021 ಆಗಸ್ಟ 23 ರಂದು ಶಿವಾನಂದ ಬೆಳಿಗಟ್ಟಿ ಎನ್ನುವಾತ ಧಾರವಾಡ‌ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.

2 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದು ಡಿಸ್ಚಾರ್ಜ ಆಗಿದ್ದಾನೆ.

ಸಂತೋಷ ಲಾಡ ಅವರ ಅಂಬ್ಯೂಲೆನ್ಸ ಯಡವಟ್ ಬಗ್ಗೆ ಸ್ವಂತ ಶಿವಾನಂದ ಬೆಳಿಗಟ್ಟಿ‌ ಹೇಳಿಕೊಂಡಿದ್ದಾನೆ.

ಇನ್ನು ಇಷ್ಟೆಲ್ಲಾ ಅಧ್ವಾನಗಳು ಜಿಲ್ಲೆಯಲ್ಲಿ ಆದ್ರೂ ಕೂಡ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ‌ (Dho) ನನಗೇನೂ ಮಾಹಿತಿ ಇಲ್ಲಾ ಅಂತಾ, ದೊಡ್ಡವರ
ಕ್ವಾಟರ್ವರ್ಸಿ ನಮಗ್ಯಾಕೆ ಎನ್ನುವಂತೆ ಜಾರಿಕೊಳತಾರೆ.

ಇದೆಲ್ಲಾ ಬೆಳವಣಿಗೆಗಳು ಆದ ಮೇಲೆ ಪವರ್ ಸಿಟಿ‌ನ್ಯೂಸ್ ಕನ್ನಡ ಯಾವಾಗಲೂ ಸತ್ಯ ಹೇಳುತ್ತೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button