Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಅರಣ್ಯ ಇಲಾಖೆ ಹಿರಿಯ ಅಧಿಕಾರಿಯ ಲವ್ವಿ- ಡವ್ವಿ -ಗಪ್- ಚುಪ್ ಆಟ…

ಧಾರವಾಡ

ಧಾರವಾಡದಲ್ಲಿ ಈ ಹಿಂದೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಒಬ್ಬರು ಯುವತಿಯ ಜೋತೆಗೆ ಮದುವೆಯಾಗುವುದಾಗಿ‌ನಂಬಿಸಿ ದೈಹಿಕ ಸಂಪರ್ಕ ಮಾಡಿಕೊಂಡು ಮೋಸ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.

ಈ ಬಗ್ಗೆ ಪವರ್ ಸಿಟಿ‌ನ್ಯೂಸ್ ಎಕ್ಸಕ್ಲೂಸಿವ್ ಮಾಹಿತಿ ಡಿಟೇಲ್ ಆಗಿ ಕೊಡ್ತಾ ಇದೆ ನೋಡಿ….

2019-20 ನೇ ಸಾಲಿನಲ್ಲಿ ಧಾರವಾಡದ CCF ಆಗಿ‌ ಕೆಲಸ ಮಾಡುವಾಗ ರವಿಶಂಕರ್ ಮಾಡಿದ ಕೆಲಸ ಇದು.

ಧಾರವಾಡದ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ರವಿಶಂಕರ್ ಅವರು, ಸಧ್ಯ ಶಿವಮೊಗ್ಗ ಜಿಲ್ಲೆಯ (CCF ) ಇದ್ದು, ಬೆಂಗಳೂರು ಮೂಲದ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡು, ಮದುವೆಯಾಗುವುದಾಗಿ ನಂಬಿಸಿ , ಸಂಸಾರ ನಡೆಸಿದ್ದಾರೆ ಎನ್ನುವ ಬಗ್ಗೆ ಇವರ ಮೇಲೆ ಎಫ.ಐ.ಆರ್ ಆಗಿದೆ.

ರವಿಶಂಕರ್ ಧಾರವಾಡದ ಫಾರೆಸ್ಟ ಐಬಿಯಲ್ಲಿ ಹಾಗೂ ದೆಹಲಿಯ ಲಾಡ್ಜ ಒಂದರಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿ, ದೈಹಿಕ ಸಂಪರ್ಕ ಮಾಡಿದ್ದಾರೆ ಎಂದು ಯುವತಿ ದೂರು ಕೊಟ್ಟಿದ್ದಾಳೆ.

ಅಷ್ಟೇ ಅಲ್ಲದೇ ಮದುವೆಯಾಗುವುದಾಗಿ ಹೇಳಿದ್ದ ರವಿಶಂಕರ್ ಅವರಿಗೆ ಈಗಾಗಲೇ ಮದುವೆಯಾಗಿದೆ ಎಂದು ಯುವತಿಗೆ ಗೊತ್ತಾದಾಗ, ಸುಮಾರು 6 ತಿಂಗಳ ಕಾಲಾವಕಾಶ ಕೇಳಿದ್ದ ರವಿಶಂಕರ್ ಮೊದಲ ಹೆಂಡ್ತಿ ಗೆ ಡೈವೋರ್ಸ ಕೋಡ್ತೇನಿ‌ ಅಂತಾ ಸಬೂಬು ಹೇಳಿದ್ದರಂತೆ.

ಇಷ್ಟೇ ಅಲ್ಲದೇ ನನ್ನ ಬಗ್ಗೆ ನೀನು ಯಾರ ಮುಂದೆಯೂ ಏನಾದ್ರೂ ಮಾತಾಡಿದ್ರೆ ಕೊಲೆ ಮಾಡ್ತೀನಿ ಅಂತಾ ಬೆದರಿಕೆ ಕೂಡ ಹಾಕಿದರಂತೆ ರವಿಶಂಕರ್ ಆ ಯುವತಿಗೆ.

ಇವೆಲ್ಲಾ ಅಂಶಗಳನ್ನು ರವಿಶಂಕರ್ ವಿರುದ್ದ ಯುವತಿ ಪೊಲೀಸ ಠಾಣೆಗೆ ಕೊಟ್ಟಿರುವ ದೂರಿನಲ್ಲಿ ಬರೆದಿದ್ದಾಳೆ…

ಇಷ್ಟೆಲ್ಲಾ ಆದ ಮೇಲೆ ರವಿಶಂಕರ್ ಇನ್ನು‌ಕೂಡ ಅರೆಸ್ಟ ಆಗಿಲ್ಲಾ. ಏಕೆಂದ್ರೆ ಆತನ ಫ್ಯಾಮಿಲಿ ಪ್ರಭಾವ ಹಾಗಿದೆ.

ಇನ್ನು ರವಿಶಂಕರ್ ಮಾಡಿರುವ ಈ‌ ಕೆಲಸ ಅರಣ್ಯ ಇಲಾಖೆಗೂ ಕಪ್ಪು ಚುಕ್ಕೆಯಾಗಿದ್ದು, ಹಿರಿಯ ಅಧಿಕಾರಿಗಳು ಈ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಯಾವ ರೀತಿ ಸಾಥ್ ಕೊಡ್ತಾರೆ ನೋಡಬೇಕಿದೆ.

Related Articles

Leave a Reply

Your email address will not be published. Required fields are marked *