Jannah Theme License is not validated, Go to the theme options page to validate the license, You need a single license for each domain name.
ಬೆಂಗಳೂರು

ಅಪಘಾತದ ಕಾರಿನಲ್ಲಿ 29 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆ

ಬೀದರ್

ಬೀದರ್ ಜಿಲ್ಲೆಯಲ್ಲಿ ಅಪಘಾತವಾದ ಕಾರಿನಲ್ಲಿ ಬರೋಬ್ಬರಿ 29 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ.

ತೆಲಂಗಾಣ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಇನೊವಾ ಕಾರಿನಲ್ಲಿ ಗಾಂಜಾ ಸಾಗಿಸುತಿದ್ದಾಗ ಬಸವಕಲ್ಯಾಣ ತಾಲೂಕಿನ ರಾಷ್ಟ್ರಿಯ ಹೆದ್ದಾರಿ-65ರ ಮೇಲಿರುವ ತಡೋಳಾ ಗ್ರಾಮದ ಸಮೀಪ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಷ್ಕಾಳಜಿಯಿಂದ ಅಪರಿಚಿತ ವಾಹನೊಂದಕ್ಕೆ ಕಾರು ಡಿಕ್ಕಿಯಾದ ಕಾರಣ ಕಾರು ಜಖಂಗೊಂಡು ರಸ್ತೆ ಬದಿ ನಿಂತಿದೆ.

ತಕ್ಷಣ ಕಾರಿನ ಚಾಲಕ ನಾಪತ್ತೆಯಾಗಿದ್ದಾನೆ.

ಅಪಘಾತದ ಸುದ್ದಿ ತಿಳಿದ ಬಸವಕಲ್ಯಾಣದ ಗ್ರಾಮೀಣ ಠಾಣೆ ಪೊಲೀಸ್‌ರ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾರು ಪರಿಶೀಲಿಸಿದಾಗ ಕಾರಿನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.

ಸುಮಾರು
29.80 ಲಕ್ಷ ರೂ. ಮೌಲ್ಯದ 298 ಕೆಜಿ ಗಾಂಜಾ ಪತ್ತೆಯಾಗಿದ್ದು, ಗಾಂಜಾ ಹಾಗೂ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದ ಹುಮನಾಬಾದ ಡಿವೈಎಸ್ಪಿ ಸೋಮಲಿಂಗ ಕುಂಬಾರ, ಬಸವಕಲ್ಯಾಣ ಗ್ರಾಮೀಣ ಠಾಣೆ ಪಿಎಸ್‌ಐ ಕಿರಣ ಧೋತ್ರೆ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿರುವ ಕಾರು ಚಾಲಕನ ಪತ್ತೆಗಾಗಿ ಪೊಲೀಸರು ಜಾಲ ಬಿಸಿದ್ದಾರೆ…..

ವರದಿ

ಮಹೇಶ್ ಸಜ್ಜನ್ , ಬೀದರ್

Related Articles

Leave a Reply

Your email address will not be published. Required fields are marked *