Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ವಿನಯ ಕುಲಕರ್ಣಿಗೆ ಡಿಸಿಎಂ ಸ್ಥಾನಕ್ಕೆ ಸ್ವಾಮೀಜಿಗಳ ಒತ್ತಾಯ

ಧಾರವಾಡ

ಮಾಜಿ ಸಚಿವ ವಿನಯ ಕುಲಕರ್ಣಿ ರಾಜ್ಯದ ಇತಿಹಾಸದಲ್ಲಿಯೇ ದಾಖಲೆ ಎನ್ನುವಂತೆ, 3 ವರ್ಷಗಳ ಕಾಲ ಕ್ಷೇತ್ರದಿಂದ ಹೊರಗಿದ್ದು ಗೆದ್ದು ಶಾಸಕರಾಗಿದ್ದಾರೆ.

ಸ್ವಾಮೀಜಿಗಳು ಇದೀಗ ಇಂತಹ ಜನನಾಯಕ ಡಿಸಿಎಂ ಆಗಲಿ ಎನ್ನುವ ಕೂಗು ಎತ್ತಿದ್ದಾರೆ.

ಧಾರವಾಡದ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಗಳು ಹಾಗೂ ಕೆಲಗೇರಿ ನಿಂದರಕಿ ಮಠದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿಗಳು ಈ ಬಗ್ಗೆ ಮಾತನಾಡಿದ್ದು, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ವಿನಯ ಅವರನ್ನು ಡಿಸಿಎಂ ಮಾಡಿ‌ ಎಂದಿದ್ದಾರೆ.‌

ಈಗಾಗಲೇ ಕ್ಯಾಬಿನೇಟ್ ಸಚಿವರಾಗಿ ಕೆಲಸ ನಿಭಾಯಿಸಿದ ಇವರು ಜಿಲ್ಲೆಯ ಗ್ರಾಮೀಣ ಕ್ಷೇತ್ರದಿಂದ 3 ಬಾರಿ ಗೆದ್ದಿದ್ದಾರೆ.

ವಿನಯ ಕುಲಕರ್ಣಿಅವರು ಎಲ್ಲಾ ಸಮುದಾಯದ ಸಮಸ್ತ ನಾಯಕರು ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ದಿಸೆಯಲ್ಲಿ ಹೊಸ ಆಯಾಮ ಕೊಡುವವರು ಎನ್ನುವ ಆಸೆ ಉತ್ತರ ಕರ್ನಾಟಕ ಭಾಗದ‌ ಜನರಲ್ಲಿ ಹಾಗೂ ಲಿಂಗಾಯತ ಸಮಾಜದ ಸ್ವಾಮೀಜಿಗಳಲ್ಲಿ ಮನೆ ಮಾಡಿದೆ.

Related Articles

Leave a Reply

Your email address will not be published. Required fields are marked *