Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಕಾಂಗ್ರೆಸ್ ನಾಯಕ , ಮಾಜಿ ಸಚಿವರು, ಮರಾಠಾ ಸಮಾಜದ ಹಿರಿಯರು ಎಸ್.ಆರ್. ಮೋರೆ ಇನ್ನಿಲ್ಲ.

ಧಾರವಾಡ

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಸ್. ಆರ್‌. ಮೋರೆ‌ ಧಾರವಾಡ ಎಸ್ ಡಿ‌ ಎಂ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ…

ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಮಾಜಿ ಸಚಿವ ಮೋರೆ ದಾಖಲಾಗಿದ್ದರು. ಆದ್ರೆ ಇಂದು ವಿಧಿವಶರಾಗಿದ್ದಾರೆ. ನಾಲ್ಕು ಬಾರಿ ಧಾರವಾಡದಿಂದ ವಿಧಾನಸಭೆಗೆ ಎಸ್.ಆರ್. ಮೋರೆ ಆಯ್ಕೆಯಾಗಿದ್ದರು..

ಬಂಗಾರಪ್ಪ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಮೋರೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದರು.

82 ವರ್ಷದ ಮೋರೆ ಅವರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಪರ ಕೆಲಸಗಳನ್ನು ಮಾಡಿದ್ದರು.
ಡಿಸೆಂಬರ್ 10 ರಂದು
ನಾಳೆ ಅವರ ಹುಟ್ಟುಹಬ್ಬ ಇತ್ತು.

ಮೋರೆ ಅವರಿಗೆ 3 ಜನ ಹೆಣ್ಣು ಮಕ್ಕಳು ಇದ್ದು, ಒಬ್ಬ ಮಗಳು ಅಮೇರಿಕಾದಲ್ಲಿ, ಇನ್ನೊಬ್ಬರು ಪುನಾದಲ್ಲಿ, ಹಾಗೂ ಕೊನೆಯ ಮಗಳು ಬೆಂಗಳೂರುನಲ್ಲಿ ಇರುತ್ತಾರೆ.

ಬಂಗಾರಪ್ಪ ಸರ್ಕಾರದಲ್ಲಿ ಸಹಕಾರಿ ಸಚಿವ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ‌ರು…ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ..

Related Articles

Leave a Reply

Your email address will not be published. Required fields are marked *