Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ ಲಕ್ಷಾಂತರ ರೂಪಾಯಿ ಬೆಳೆ ಹಾನಿ

ಧಾರವಾಡ

ಕಬ್ಬಿನ‌ ಹೊಲಕ್ಕೆ ಶಾರ್ಟ್ ‌ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದ ಪರಿಣಾಮ ಲಕ್ಷ್ಯಾಂತರ ರೂಪಾಯಿ ಬೆಳೆಹಾನಿಯಾಗಿದೆ.

ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

25 ಎಕರೆ ಕಬ್ಬಿನ‌ ಗದ್ದೆ, ಒಂದು ಭತ್ತದ ಬಣವೆ ಬೆಂಕಿಗೆ ಆಹುತಿಯಾಗಿದೆ.

ದೇವರಹುಬ್ಬಳಿ ಗ್ರಾಮದ ರೈತರಾದ
ನೂರ ಅಹಮ್ಮದ್ ಮುಲ್ಲಾ, ಖಾದರ‌ಸಾಬ್ ಮುಲ್ಲಾ, ನಜೀರ್ ಅಹ್ಮದ್. ಮಹ್ಮದ್ ಗೌಸ್ ಮುಲ್ಲಾ ಅವರಿಗೆ ಸೇರಿದ ಕಬ್ಬಿನ ಹೊಲ ಇದಾಗಿದೆ.

ಮಹ್ಮದ್ ಗೌಸ್ ಗೆ ಸೇರಿದ ಭತ್ತದ ಬಣವೆ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ,
ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಆಗಿರುವ ನಷ್ಟದ ಬಗ್ಗೆ ಹಾನಿ ಭರಿಸಿಕೊಡಬೇಕಿದೆ.

Related Articles

Leave a Reply

Your email address will not be published. Required fields are marked *