Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿಹುಬ್ಬಳ್ಳಿ

ಬೆಳ್ಳಂ ಬೆಳಿಗ್ಗೆ ಹಿಟ್ ಆ್ಯಂಡ್ ರನ್: ವೃದ್ಧನ ಸ್ಥಿತಿ ಗಂಭೀರ!

ಹುಬ್ಬಳ್ಳಿ

ರಸ್ತೆ ದಾಟುತ್ತಿದ್ದ ವೃದ್ಧನೋರ್ವನಿಗೆ ಬೈಕ ಸವಾರ ನೋರ್ವ ಅಪಘಾತ ಪಡಿಸಿ ಸ್ಥಳದಿಂದ ಪರಾರಿಯಾದ ಘಟನೆ ಇಂದು ನಡೆದಿದೆ.

ಗಾಯಾಳು

ಉಣಕಲ್ ಬಳಿಯ ಶ್ರೀ ಸಿದ್ಧಪ್ಪಜ್ಜನ ದೇವಸ್ಥಾನದ ಬಳಿ ಚಹಾ ಕುಡಿಯಲು ಬಂದಿದ್ದ ಉಣಕಲ್ ಮೂಲದ ಕಲ್ಲನಗೌಡ ಮಿಸಿಗೌಡರ ಎಂಬ ವಯೊವೃದ್ಧ ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಬೈಕ್ ಸವಾರ ನೋರ್ವ ವೃದ್ಧನಿಗೆ ಗುದ್ದಿದ್ದಾನೆ. ಇದರಿಂದ ನೆಲಕ್ಕೆ ಬಿದ್ದ ವೃದ್ಧನ ತಲೆಗೆ ಗಂಭೀರ ಸ್ವರೂಪದ ಗಾಯ ವಾಗಿದ್ದು ಸ್ಥಳೀಯರ ಸಹಾಯದಿಂದ ಅಂಬ್ಯೂಲೆನ್ಸ್ ಮೂಲಕ ಚಿಕಿತ್ಸೆ ಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಬೈಕ್ ಸವಾರನ ಪತ್ತೆಗೆ ಸಂಚಾರಿ ಪೊಲೀಸರು ಮುಂದಾಗ ಬೇಕಿದೆ.

Related Articles

Leave a Reply

Your email address will not be published. Required fields are marked *