Jannah Theme License is not validated, Go to the theme options page to validate the license, You need a single license for each domain name.
ರಾಜ್ಯ

ವೆಂದೇ ಭಾರತ ರೈಲಿನಲ್ಲಿ ಕಳ್ಳರ ಕೈ ಚಳಕ!

powercity news :- ಹುಬ್ಬಳ್ಳಿ

ಧಾರವಾಡ-ಬೆಂಗಳೂರು ಮಾರ್ಗದಲ್ಲಿ ಆರಂಭವಾಗಿರುವ ಮೊಟ್ಟ ಮೊದಲ ವಂದೇ ಭಾರತ್ ರೈಲಿನಲ್ಲಿ ಕಳ್ಳರು ಕೈ ಚಳಕ ತೋರಿದ ಘಟನೆ ನಡೆದಿದ್ದು, ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರ 3.80 ಲಕ್ಷ ರೂ. ಮೌಲ್ಯದ ಲ್ಯಾಪಟಾಪ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಹೌದು.. ಹುಬ್ಬಳ್ಳಿಯ ಆನಂದ ಸಿ. ಎಂಬುವರ ಲ್ಯಾಪಟಾಪ್ ಕಳ್ಳತನ ಮಾಡಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆನಂದ ಜು. 5 ರಂದು ಬೆಂಗಳೂರು, ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ಹುಬ್ಬಳಿಗೆ ವಂದೆ ಭಾರತ ಎಕ್ಸಪ್ರೆಸ್‌ ರೈಲಿನಲ್ಲಿ ಸಿ-04 ಕೋಚ್ ನಲ್ಲಿ ಆಗಮಿಸಿದ್ದರು.
ತಮ್ಮ ಬ್ಯಾಗನ್ನು ಲಗೇಜ್ ರ್ಯಾಕ್‌ ದಲ್ಲಿ “ಮ್ಯಾಕ್” ಕಂಪನಿಯ ಲ್ಯಾಪ್ ಟಾಪ್ ಇಟ್ಟು ಪ್ರಯಾಣಿಸಿದಾಗ ಬೆಳಗ್ಗೆ 9.40 ಕ್ಕೆ ದಾವಣಗೆರೆ ರೈಲು ನಿಲ್ದಾಣದ ಬಳಿ ಬಂದಾಗ ಬ್ಯಾಗ್ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಈ ಕುರಿತು ಹುಬ್ಬಳ್ಳಿಯ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *