Jannah Theme License is not validated, Go to the theme options page to validate the license, You need a single license for each domain name.
ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಕಿಮ್ಸ್ ನಲ್ಲಿ ಭದ್ರತಾ ಲೋಪ : ಬಿಂದಾಸ್ ರೀಲ್ಸ್ ಮಾಡಿದ ವಿದ್ಯಾರ್ಥಿಗಳು!

powercity news ಹುಬ್ಬಳ್ಳಿ:

ಹುಬ್ಬಳ್ಳಿ

ಸದಾ ಒಂದಿಲ್ಲೋಂದು ಸುದ್ದಿಗೆ ಆಹಾರವಾಗುತ್ತಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಸುದ್ದಿಯಲ್ಲಿದೆ.

ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಮಹೀಳೆ ಹಾಗೂ ಯುವತಿಯರ ಖಾಸಗಿತನವನ್ನು ವಿಕೃತ ಮನಸ್ಸಿನ ಕೆಲವರು ಕದ್ದು ವಿಡಿಯೋ ಮಾಡಿ ಪೊಲಿಸರ ಅತಿಥಿಯಾಗಿ ಕಂಬಿ ಹಿಂದೆ ಹೊಗುತ್ತಿರುವ ಪ್ರಕರಣಗಳ ನಡುವೆಯೇ,

ಇಂತಹದೆ ಸುದ್ದಿಗೆ ಆಹ್ವಾನ ನೀಡಿರುವ ಇಲ್ಲಿನ ಹುಬ್ಬಳ್ಳಿಯ ಕಿಮ್ಸ್ ಮೆಡಿಕಲ್ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮದೆ ಸಹ ವೃತ್ತಿನಿರತ ಶುಶ್ರೂಷಕಿಯರ ಕುರಿತು ರೀಲ್ಸ್ ಮಾಡುವ ಭರದಲ್ಲಿ ಕನ್ನಡದ ಹಾಡೋಂದನ್ನ ತಿರುಚಿ ನರ್ಸಗಳ ವೃತ್ತಿಗೆ ಧಕ್ಕೆ ತರುವಂತಹ ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿಬಿಟ್ಟಿದ್ದಾರೆ.

ಇದರಿಂದ ಕೆರಳಿರುವ ಕಿಮ್ಸ್ ಆಸ್ಪತ್ರೆಯ ಶುಶ್ರೂಷಕ ಸಿಬ್ಬಂದಿಗಳು ತಪ್ಪಿತಸ್ಥ ವಿಧ್ಯಾರ್ಥಿಗಳನ್ನ ಕೂಡಲೇ ಕಿಮ್ಸ್ ವಿಭಾಗದಿಂದ ಹೊರಕಳಿಸಿ ಕಾನೂನುಕ್ರಮ ಕೈಗೊಳಲು ಆಗ್ರಹಿಸಿದರು. ಸದ್ಯಕ್ಕೆ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರ್ಥಾನಿಯವರೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

ಇನ್ನೂ ಸ್ಥಳಕ್ಕೆ ಭೇಟಿ ನಿಡಿದ ವಿದ್ಯಾನಗರ ಪೊಲಿಸರು ಘಟನೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು ಒಂದು ವೇಳೆ ಯಾರಾದರೂ ದೂರು ನೀಡಿದರೆ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ!

Related Articles

Leave a Reply

Your email address will not be published. Required fields are marked *