Jannah Theme License is not validated, Go to the theme options page to validate the license, You need a single license for each domain name.
ಯಾದಗಿರಿ

ಊರಿನಲ್ಲಿ ಯಾರ ಮನೆಗೆ ಹಾವು ಬಂದ್ರೆ, ಹಿಡಿದು ಬಿಟ್ಟು ಬರುತ್ತಿದ್ದ ವೃದ್ದ- ಸಾವನ್ನಪ್ಪಿದ್ದು ಮಾತ್ರ ದುರಂತ

ಯಾದಗಿರಿ

ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹಿಡಿದು ವೃದ್ದನೊಬ್ಬ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯದ ವಡಗೇರಾ ತಾಲೂಕಿ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ.

ಗೋಡಿಹಾಳ ಗ್ರಾಮದ ಬಸವರಾಜ್ ಪೂಜಾರ್ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ವೃದ್ದನಾಗಿದ್ದಾನೆ.
ಹಾವು ಕಚ್ಚುತ್ತಿದ್ದರು ಕೈಯಲ್ಲಿ ಹಾವನ್ನು ಹಿಡಿದುಕೊಂಡೆ ಸಾವನ್ನಪ್ಪಿದ್ದಾನೆ.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಯಾವುದಾದರೂ ಮನೆಯಲ್ಲಿ ಹಾವು ಬಂದ್ರೆ ಅದನ್ನ ಹಿಡಿದು ದೂರ ಬಿಟ್ಟು ಬರುವ ಕೆಲಸ ಮಾಡುತ್ತಿದ್ದ ಈ ವೃದ್ದ .

ಗ್ರಾಮದಲ್ಲಿ 300 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದು ಬಿಟ್ಟು ಬಂದಿದ್ದ. ಈ ಬಾರಿ ಹಾವು ಹಿಡಿದಾಗ 5 ಕ್ಕೂ ಹೆಚ್ಚು ಬಾರಿ ಹಾವು ಕಚ್ಚಿದೆ.

ಸದ್ಯ ವಯಸ್ಸಾಗಿದ್ರು ಮನೆಯೊಳಗೆ ಹಾವು ನುಗ್ಗುತ್ತಿರೋದನ್ನ ನೋಡಿ ಹಾವನ್ನ ಹಿಡಿದಿದ್ದಾನೆ.
ಹಾವಿನ ಗಾತ್ರ ದೊಡ್ಡದಿರೊ ಕಾರಣ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ.
ಕೊನೆಗೆ ತಾನು ಸಾವನ್ನಪ್ಪಿದ ಬಳಿಕವೆ ಹಾವನ್ನ ಕೈಯಿಂದ ಬಿಟ್ಟಿದ್ದಾನೆ. ವೃದ್ದ ಸಾವನ್ನಪ್ಪಿದ ಬಳಿಕ ಗ್ರಾಮಸ್ಥರು ಹಾವನ್ನು ಹೊಡೆದಿದ್ದಾರೆ.
ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *