Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಮಾಜಿ ಸಚಿವ ಎಸ್.ಆರ್.ಮೋರೆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ – ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಧಾರವಾಡ

ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರು ಹಾಗೂ ಮರಾಠಾ ಸಮಾಜದ ಹಿರಿಯ ನಾಯಕರು ಆದ ಎಸ.ಆರ್.ಮೋರೆ
ಅನಾರೋಗ್ಯದ ನಿಮಿತ್ತ ನಿಧನ ಹೊಂದಿದ ಹಿನ್ನೆಲೆಯಲ್ಲಿ ಇಂದು, ಎಸ್.ಆರ್ ಮೋರೆ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ , ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ, ಕುಟುಂಬಸ್ಥರಿಗೆ ಸಾತ್ವಾಂನ ಹೇಳಿದ್ರು.‌

ಧಾರವಾಡ ನಗರದ ಮೋರೆ‌ ಫಾರ್ಮ್ ಹೌಸಗೆ ಭೇಟಿ ನೀಡಿದ ಸಿಎಂ ಎಸ್ ಆರ್ ಮೋರೆ ಕುಟುಂಬದ ಜೋತೆಗೆ ಕೆಲಹೊತ್ತು ಚರ್ಚಿಸಿದ್ರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ೪ ದಶಕಗಳ ಕಾಲ ಧಾರವಾಡದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ್ದರು ಎಸ.ಆರ್. ಮೋರೆ, ಅವರೊಬ್ಬ ಅಜಾತ ಶತ್ರು ಎಂದರು.


ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ , ಮೋರೆ ಅವರು, 5 ದಶಕಗಳಿಂದ ರಾಜಕೀಯದಲ್ಲಿ ಕೆಲಸ ಮಾಡಿಕೊಂಡು ಬಂದವರು. ಯಾವತ್ತಿಗೂ ಅವರು ವಿವಾದಾತ್ಮಕ ಹೇಳಿಕೆಗಳನ್ನು ‌ಕೊಟ್ಟಿಲ್ಲಾ. ಅವರೊಬ್ಬ ಒಳ್ಳೆಯ ಅಭಿವೃದ್ಧಿ ಪರ ಕಾಳಜಿ ಇರತಕ್ಕಂತಹ ರಾಜಕಾರಣಿಯಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಬಿಜೆಪಿ ನಾಯಕರುಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *