Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗಾಗಿ ವಿಶೇಷ ಸಭೆ

ಧಾರವಾಡ

ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ, ಧಾರವಾಡ ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಎಲ್&ಟಿ ಅಧಿಕಾರಿಗಳೊಂದಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಇಂದು ವಿಶೇಷ ಸಭೆ ನಡೆಸಿದ್ರು.


ಈ ಸಂದರ್ಭದಲ್ಲಿ ಮಹಾನಗರದಲ್ಲಿ ನಾಗರಿಕರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಒದಗಿಸಲು, ಬೋರವೆಲ್ ದುರಸ್ಥಿಗೊಳಿಸಲು, ಹಾಗೂ ಟ್ಯಾಂಕರ್ ವ್ಯವಸ್ಥೆ ಮಾಡಲು ಎಲ್&ಟಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಉಪ ಮಹಾಪೌರರಾದ ಶ್ರೀಮತಿ ಉಮಾ ಮುಕುಂದ ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ, ಪಾಲಿಕೆಯ ಸದಸ್ಯರಾದ ಸುರೇಶ ಬೆದರೆ, ಜ್ಯೋತಿ ಪಾಟೀಲ, ಲಕ್ಷ್ಮೀ ಹಿಂಡಸಗೇರಿ, ಶಂಭು ಸಾಲಿಮನಿ, ರಾಜು ಕಮತಿ, ಶಿವು ಹಿರೇಮಠ, ದೀಪಾ ನೀರಳಕಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *