Jannah Theme License is not validated, Go to the theme options page to validate the license, You need a single license for each domain name.
ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪಾಲಿಕೆಯ ಆಟೋಟಿಪ್ಪರ್ ಅಪಘಾತ ಚಾಲಕನ ಸಾವು!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಎತ್ತುವ ಅಟೋ ಟಿಪ್ಪರ್ (ಅಶೋಕ ಲೈಲೆಂಡ್) ವಾಹನದ ಎರ್ ಲಿಪ್ಟ್ ದುರಸ್ತಿ ಮಾಡುತ್ತಿದ್ದ ಗೋಪನಕೊಪ್ಪದ ಚಾಲಕ ವಸಂತ ದುರ್ಗಪ್ಪ ಇಲಕಲ್ಲ (38) ಇವರ ಮೇಲೆ ಎರ್ ಲಿಪ್ಟ್ ಕಂಟೇನರ್ ಮಗುಚಿ ತಲೆಯ ಮೇಲೆ ಬಿದ್ದ ಘಟನೆ ಬೆಂಗೆರಿಯಲ್ಲಿ ನಡೆದಿದೆ.

ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದಿರುವುದರಿಂದ ಗಾಯಾಳು ಮೃತಪಟ್ಟಿದ್ದಾನೆ.

(ಫೈಲ್)

ಘಟನೆ ನಡೆದು ಘಂಟೆಗಳೆ ಉಳುರಿದರು ಪಾಲಿಕೆಯ ಯಾವ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿಲ್ಲ ವೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೆ ನೇರ ಹೊಣೆಗಾರರು.

ವಿಜಯ್ ಗುಂಟ್ರಾಳ್

ಈ ಕೂಡಲೆ ಮೃತನ ಕುಟುಂಬಕ್ಕೆ ಪರಿಹಾರ ವಿತರಿಸ ಬೆಕು ಮತ್ತು ಮೃತನ ಕುಟುಂಬಕ್ಕೆ ಪಾಲಿಕೆ ಅಡಿಯಲ್ಲಿ ಉದ್ಯೋಗ ಕಲ್ಪಿಸಿ ಕೊಡಬೇಕೆಂದು ಪೌರ ಕಾರ್ಮಿಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆಗ್ರಹಿಸಿದ್ದಾರೆ.ಒಂದು ವೇಳೆ ಇ ಬಗ್ಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ. ಶವದೊಂದಿಗೆ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *