Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಧಾರವಾಡ ಗ್ರಾಮೀಣದಲ್ಲಿ ಮತ್ತೆ ‘ಕೈ’ಗೆ ಅಧಿಕಾರ

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದ್ದು, ಕೈಗೆ ಮತ್ತೆ ಅಧಿಕಾರ ಲಭಿಸಲಿದೆ. ಈ ಕ್ಷೇತ್ರದಲ್ಲಿ ಮತ್ತೆ ವಿನಯ್ ಕುಲಕರ್ಣಿ ನೆಲೆಯೂರುವುದು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದರು.

ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ಅದ್ಧೂರಿ ಪಾದಯಾತ್ರೆ ನಡೆಸಿದ ನಂತರ ಅವರು ಮಾತನಾಡಿದರು.

ಶಿಂಗನಹಳ್ಳಿ ಗ್ರಾಮಕ್ಕೆ ವಿನಯ್ ಕುಲಕರ್ಣಿ ವಿಶೇಷವಾದ ಒತ್ತು ಕೊಟ್ಟಿದ್ದರು. ಅವರು ಮಾಡಿದ ಕಾರ್ಯಗಳು ಇಂದು ಅವರನ್ನು ನೆನಪಿಸುತ್ತಿವೆ. ಸದ್ಯ ಬಿಜೆಪಿಯಿಂದ ನಡೆಯುತ್ತಿರುವ ದ್ವೇಷದ ರಾಜಕಾರಣ ಎಲ್ಲರಿಗೂ ಗೊತ್ತೇ ಇದೆ. ವಿನಯ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಪ್ರಯತ್ನ ನಡೆದಿದೆ.

ಅಲ್ಲದೇ ನಮ್ಮ ಬೆಂಬಲಿಗರ ಮನೆ ಮೇಲೆ ಐಟಿ ರೇಡ್ ಮಾಡಿಸುವ ಮೂಲಕ ಬಿಜೆಪಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂತಹ ನೀಚ ಕೃತ್ಯಕ್ಕೆ ನಾವು ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು ಇದರಿಂದ ಮತ್ತಷ್ಟು ಗಟ್ಟಿಗೊಳ್ಳುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ವಿನಯ್ ಅವರ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಶಿವಲೀಲಾ ಅವರು ಮನೆ, ಮನೆಗೆ ತೆರಳಿ ವಿನಯ್ ಕುಲಕರ್ಣಿ ಪರ ಮತಯಾಚನೆ ಮಾಡಿದರು. ಮನೆ, ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಂಗನಹಳ್ಳಿ ಗ್ರಾಮದ ಮಹಿಳೆಯರು ಶಿವಲೀಲಾ ಅವರಿಗೆ ಉಡಿ ತುಂಬಿ, ಆರತಿ ಬೆಳಗಿ ಧೈರ್ಯ ಹೇಳಿದರಲ್ಲದೇ ಚುನಾವಣೆಯಲ್ಲಿ ವಿನಯ್ ಅವರೇ ಗೆಲುವು ಸಾಧಿಸುತ್ತಾರೆ ಎಂಬ ಅಭಯ ನೀಡಿದರು.

Related Articles

Leave a Reply

Your email address will not be published. Required fields are marked *