Jannah Theme License is not validated, Go to the theme options page to validate the license, You need a single license for each domain name.
CITY CRIME NEWSDHARWADHubballiWorld

ಕ್ರಿಕೇಟ್ ಬೆಟ್ಟಿಂಗ್ ಅವಳಿನಗರದಲ್ಲಿ ಮೂವರ ಬಂಧನ!

Cricket betting arrest.

POWERCITY NEWS : HUBBALLI

ಹುಬ್ಬಳ್ಳಿ

ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಬಾಹೀರ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಅವಳಿನಗರದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಿರುವ ಅವಳಿನಗರದ ಪೊಲಿಸ್ ಇಲಾಖೆ ಧಾರವಾಢ ಶಹರ ಠಾಣೆ ವ್ಯಾಪ್ತಿಯ ದುರ್ಗಾ ಕಾಲೊನಿಯಲ್ಲಿ ಕ್ರಿಕೇಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ರವಿವಾರ ಪೇಟೆ ನಿವಾಸಿ ಶರೀಫ್ ನದಾಫ್ ಎಂಬುವನನ್ನು ಬಂದಿಸಿದ್ದಾರೆ.

ಇನ್ನೂ ಹಳೆಹುಬ್ಬಳ್ಳಿಯ ಅಲ್ತಾಪ್ ಪ್ಲಾಟ್‌ನಲ್ಲಿ ಕ್ರಿಕೇಟ್ ಬೆಟ್ಟಿಂಗನಲ್ಲಿ ನಿರತರಾಗಿದ್ದವರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲಿಸರು ಇಬ್ಬರನ್ನು ವಶಕ್ಕೆ ಪಡೆದು ಹಳೆಹುಬ್ಬಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಢ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ದಾಳಿಯಲ್ಲಿ ಮೂವರನ್ನ ಬಂದಿಸಿದ್ದು. ಆರೋಪಿಗಳಿಂದ ಮೂಬೈಲ್,ನಗದು ಹಣ ಸೇರಿದಂತೆ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಿಗಿರುವವರನ್ನ ಮಟ್ಟಹಾಕಲು ಮುಂದಾಗಿರುವ ಅವಳಿನಗರದ ಪೊಲೀಸ್ ಆಯುಕ್ತರು ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಅಂಥವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *