Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSDHARWAD

ಕೊಲೆಗೆ ಸ್ಕೆಚ್ ಹಾಕಿದ್ದ ತಂಡ ತಲ್ವಾರ್ ಸಮೇತ ಅಂದರ್!

ಎಂ ಆರ್ ದಖನಿ

POWER CITYNEWS : HUBBALLI

ಹುಬ್ಬಳ್ಳಿ: ಕೊಲೆಗೆ ಸಂಚು ರೂಪಿಸಿದ್ದ ಆರು ಜನರ ತಂಡವನ್ನು ಆಯುಧಗಳ ಸಮೇತವಾಗಿ ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

6 ಜನರ ತಂಡವೊಂದು ಕೊಲೆಗೆ ಸಂಚು ರೂಪಿಸಿದವರ ಬಂಧಿಸಿದ್ದು, ಬಂಧಿತರಿಂದ ಒಂದು ಅಟೋ ರಿಕ್ಷಾ, 2 ಮೋಟಾರ ಸೈಕಲ್, 2 ತಲವಾರಗಳು ಹಾಗೂ 2 ಚಾಕುಗಳ ವಶಕ್ಕೆ ಪಡೆದಿದ್ದಾರೆ. ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಸಿದ್ದಾರೂಢ ಮಠದ ದ್ವಾರ ಬಾಗಿಲ ಹತ್ತಿರ ಕೊಲೆಗೆ ಸಂಚು ರೂಪಿಸಿದವರ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿತರನ್ನು ಪತ್ತೆ ಹಚ್ಚಿ ಅವರಿಂದ ಒಂದು ಅಟೋ ರಿಕ್ಷಾ, 2 ಮೋಟಾರ ಸೈಕಲ, 2 ತಲವಾರ ಹಾಗೂ 2 ಚಾಕುಗಳನ್ನು ವಶಪಡಿಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನೂ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತರನ್ನು ಪತ್ತೆ ಮಾಡಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ, ಪೊಲೀಸ್ ಸಬ್ ಇನ್ಸಪೆಕ್ಟರಗಳು, ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿ ಶ್ಲಾಘಿಸಿ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *