Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSDHARWADHubballiPoliceProtest

ರಾತ್ರೋರಾತ್ರೀ ಮೂರ್ತಿ ಪ್ರತಿಷ್ಠಾಪನೆ:ಎಚ್ಚೆತ್ತ ಪೊಲೀಸರು ಮಾಡಿದ್ದೇನು?

M R DALHANI

POWER CITYNEWS : HUBLI

ಹುಬ್ಬಳ್ಳಿ:ಅಭಿವೃದ್ಧಿ ನಡೆಯುತ್ತಿರುವ ಕಾಮಗಾರಿಯ ಮಧ್ಯೆ ಅಪರಿಚಿತರು ರಾತ್ರೋರಾತ್ರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ತಂದಿಟ್ಟಿರುವ ಘಟನೆ ಆನಂದವನ್ನು ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಹಳೇ ಹುಬ್ಬಳ್ಳಿ ಹಾಗೂ ಕಸಬಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ತಡರಾತ್ರಿ ಅಪರಿಚಿತ ವ್ಯಕ್ತಿಗಳು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬಳಿ ರಸ್ತೆ ಪಕ್ಕದಲ್ಲಿ ಕಂಭದ ಮೇಲೆ ಮೂರ್ತಿ ಇಟ್ಟು ಹೂ ಮಾಲೆ ಹಾಕಿದ್ದಾರೆ.. ಈ‌ ನಿಟ್ಟಿನಲ್ಲಿ ಸುದ್ಧಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಇನ್ನೂ ನೀರಿನ ಟ್ಯಾಂಕ್ ಬಳಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಮೂರ್ತಿ ಇಟ್ಟು ಮಾಲೆ ಹಾಕಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಯಾವುದೇ ರೀತಿಯಲ್ಲಿ ಅಪಮಾನ ಆಗಬಾರದು ಎಂಬುವಂತ ಸದುದ್ದೇಶದಿಂದ ಪೊಲೀಸ್ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಚಿಂತನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *