ಜೂನ್ 17ರಿಂದ ಮೊಹರಂ ಆರಂಭ; ಜೂನ್ 26ಕ್ಕೆ ಆಶೂರಾ!
Dakhani

POWER CITYNEWS: HUBBALLIಹುಬ್ಬಳ್ಳಿ: ಇಲ್ಲಿನ ಪ್ರತಿಷ್ಠಿತ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಕೇಂದ್ರ ಸಮಿತಿಯು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ.
ಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳಾದ ಬಶೀರ್ ಅಹ್ಮದ್ ಎ. ಹಲ್ಯಾಳ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಜೂನ್ 16, 2026ರ ಮಂಗಳವಾರದಂದು 1448 ಹಿಜರಿ ವರ್ಷದ ಪವಿತ್ರ ‘ಮೊಹರಂ-ಉಲ್-ಹರಾಮ್’ ತಿಂಗಳ ಚಂದ್ರ ದರ್ಶನವಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 17 ಮೊದಲ ದಿನ:
ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ, ಜೂನ್ 17, 2026ರ ಬುಧವಾರದ ದಿನವನ್ನು ಇಸ್ಲಾಮಿಕ್ ಕ್ಯಾಲೆಂಡರ್ನ ನೂತನ ವರ್ಷದ ಹಾಗೂ ಮೊಹರಂ ತಿಂಗಳ ಮೊದಲನೇ ತಾರೀಖು ಎಂದು ಘೋಷಿಸಲಾಗಿದೆ.
ಜೂನ್ 26ಕ್ಕೆ ‘ಯೋಮ್-ಎ-ಆಶೂರಾ’:
ಮೊಹರಂ ತಿಂಗಳ ಅತ್ಯಂತ ಪ್ರಮುಖ ಹಾಗೂ ಪವಿತ್ರ ದಿನವಾದ 10ನೇ ದಿನ ‘ಯೋಮ್-ಎ-ಆಶೂರಾ’ (ಶಹಾದತ್) ಅನ್ನು ಮುಂಬರುವ ಜೂನ್ 26, 2026ರ ಶುಕ್ರವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು ಎಂದು ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪ್ರಕಟಣೆ ತಿಳಿಸಿದೆ.



