BREAKING NEWSCITY CRIME NEWSDHARWADL&TLife StyleTechTWINCITY

ಅನಧಿಕೃತ ಆಪ್‌ಗಳಿಗೆ ನಿಷೇಧಿಸಿ: ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಪ್ರತಿಭಟನೆ!

Dakhani

POWER CITYNEWS: HUBBALLIಹುಬ್ಬಳ್ಳಿ: ನಗರದಲ್ಲಿ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಸಂಚರಿಸುತ್ತಿರುವ ಓಲಾ, ಉಬರ್, ರ‍್ಯಾಪಿಡೋ ಹಾಗೂ ನಮ್ಮ ಯಾತ್ರಿ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ವಾಹನಗಳ ವಿರುದ್ಧ ಸಾರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ* ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆಟೋ ಚಾಲಕರ ಪ್ರಮುಖ ಬೇಡಿಕೆಗಳು ಮತ್ತು ಸಮಸ್ಯೆಗಳು:

ಅನಧಿಕೃತ ಆಪ್‌ಗಳಿಗೆ ನಿಷೇಧ:* ಸಾರಿಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಗಳ ಅನಧಿಕೃತ ಆಪ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಇವುಗಳ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು.

ಇ-ರಿಕ್ಷಾ ಪರ್ಮಿಟ್ ನಿಯಂತ್ರಣ:* ಧಾರವಾಡ ಜಿಲ್ಲಾದ್ಯಂತ ಜನಸಂಖ್ಯೆಗಿಂತಲೂ ಅಧಿಕವಾಗಿ ಆಟೋಗಳು ರಸ್ತೆಗಿಳಿದಿವೆ. 2016 ರಿಂದಲೇ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಹಾಗೂ ಸಿಎನ್‍ಜಿ ಆಟೋಗಳಿಗೆ ಹೊಸ ಪರ್ಮಿಟ್ ನೀಡುವುದನ್ನು ನಿಲ್ಲಿಸಲಾಗಿದೆ. ಅದೇ ರೀತಿ, ಈಗಾಗಲೇ ನೀಡಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಪರ್ಮಿಟ್ ನೀಡಿ, ಇನ್ನುಮುಂದೆ ಹೊಸ ಇ-ರಿಕ್ಷಾಗಳಿಗೆ ಪರ್ಮಿಟ್ ನೀಡುವುದನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು.

ಜೀವನ ನಿರ್ವಹಣೆ ಕಷ್ಟಕರ:* ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದಾಗಿ ಆಟೋಗಳಿಗೆ ಬಾಡಿಗೆ ಕಡಿಮೆಯಾಗಿದೆ. ಇದರ ನಡುವೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ನಿತ್ಯಬಳಕೆಯ ವಸ್ತುಗಳು ಹಾಗೂ ಆಟೋ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಮಕ್ಕಳ ದುಬಾರಿ ಶಿಕ್ಷಣ, ಕುಟುಂಬದ ಆರೋಗ್ಯ ವೆಚ್ಚ ಸರಿದೂಗಿಸಲಾಗದೆ ಆಟೋ ಚಾಲಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

“ಒಂದೆಡೆ ಬೆಲೆ ಏರಿಕೆ ಹಾಗೂ ಸರ್ಕಾರದ ಯೋಜನೆಗಳಿಂದಾಗಿ ಬಾಡಿಗೆ ಇಲ್ಲದೆ ಆಟೋ ಚಾಲಕರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಆಪ್ ಆಧಾರಿತ ಅನಧಿಕೃತ ವಾಹನಗಳು ನಮ್ಮ ಹೊಟ್ಟೆಮೇಲೆ ಹೊಡೆಯುತ್ತಿವೆ. ಇವುಗಳಿಗೆ ತಕ್ಷಣ ಬ್ರೇಕ್ ಹಾಕಬೇಕು.”
– ಆಟೋ ಚಾಲಕರ ಸಂಘ

ಈ ಸಂಧರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ದಾವಲಸಾಬ ಕುರಹಟ್ಟಿ, ಮುರಳಿ ಇಂಗಳಹಳ್ಳಿ, ಲೋಕೇಶ ಚಿಕ್ಕಮಂಗಳೂರು, ಪರಶುರಾಮ ಪೂಜಾರ, ರಫೀಕ ಕುಂದಗೋಳ, ರಾಜೇಶ ಬಿಜವಾಡ, ದಾವೂದ ಅಲಿಶೇಖ, ಮಹಾವೀರ ಬಿಲಾನ, ಮಲ್ಲಿಕಾರ್ಜುನ ನಂದಿಹಾಳ, ಗುರು ಬೇಟಗೇರಿ, ಬಾಬರ ಜಮಖಾನೆ, ಆರೀಫ ಕಿಂಗಮೇಕರ್, ಸಾದಿಕ್ ತಡಕೋಡ, ಅಮರ ಗದಗ್, ಅಮರೀಶ ಅಣಿ, ಮುತ್ತು ಬಾರಕೇರ, ಶ್ರೀಕಾಂತ ಗಡದ, ಶ್ರೀಕಾಂತ ಕಲಾಲ, ಶಿವರಾಜ ಸಿಂಗನಹಳ್ಳಿ, ಮಹೇಶ ದೊಡ್ಡಮನಿ, ಅಣ್ಣಪ್ಪ ಗುಡಿಹಾಳ, ರಾಜು ಬಿಜವಾಡ, ಶ್ರೀಕಾಂತ ದಾಸರ, ಯುಸೂಫ್ ಜಾಲಗಾರ, ರಾಕೇಶ ಚವ್ಹಾಣ, ಚಂದ್ರಗೌಡ ಪಾಟೀಲ, ಶಂಕರ ಆಚಾರ್ಯ, ಮಾರುತಿ ಅಂಚಟಗೇರಿ, ಶಬೀರ್ ಜಾಮೀನದಾರ, ಸಾಗರ ನರಗುಂದ, ಕರಡಿ ಸುನೀಲ, ರಮೇಶ ನಂದ್ಯಾಳ, ಇಮ್ಮಿಯಾಜ ಉಡುಪಿ, ನಜೀರ ಬಳ್ಳಾರಿ, ರಾಜೇಸಾಬ ಹುಜರಾತಿ, ಜಾಫರ ಯಲಿಗಾರ, ಶಮಶೋ ಬಾಗಲಕೋಟ, ಸಾದಿಕ್ ಬಡೇದಾವಲಜಿ, ಆನಂದ ಭಜಂತ್ರಿ, ಪವನ ಹಾವರಗಿ, ನಿಂಗಪ್ಪ ಗೋರಕ್ಕನವರ, ಮಂಜುನಾಥ ಚಳಮಟ್ಟಿ, ಮಂಜು, ಗೋಪಾಲ, ಗಂಗಾಧರ ಸೇರಿದಂತೆ ನೂರಾರು ಆಟೋ ಚಾಲಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *