ಹೊಸೂರು ಅಕ್ಬರ್ : ಕೊಲೆ ಕೇಸ್ ಸಾಕ್ಷಿಗೆಕೋರ್ಟ್ಸಮನ್ಸ್!
POWER CITY

POWER CITYNEWS :ಹುಬ್ಬಳ್ಳಿ ಹುಬ್ಬಳ್ಳಿ: ಇಡೀ ಅವಳಿ ನಗರವನ್ನು ಬೆಚ್ಚಿಬೀಳಿಸಿದ್ದ ಹಳೇ ಹುಬ್ಬಳ್ಳಿಯ ಘೋರ ಕೊಲೆ ಮತ್ತು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ತೀವ್ರಗೊಂಡಿದೆ.
ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಹುಬ್ಬಳ್ಳಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತುರ್ತು ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲು ಕಟ್ಟುನಿಟ್ಟಿನ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ ಮತ್ತು ಐಪಿಸಿ ಸೆಕ್ಷನ್‌ಗಳು:
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ ಅರವಿಂದ್ ನಗರದ ಪಿಎನ್ ಟಿ ಕ್ವಾಟರ್ಸ್ ಬಳಿಯ ಪಾಳು ಬಿದ್ದ ಕಟ್ಟಡದ ಬಳಿ ಈ ಕೊಲೆ ನಡೆದಿತ್ತು. ಇ ಅಪರಾಧಿಕ ಪ್ರಕರಣಕ್ಕೆ (SC/5067/2023) ಸಂಬಂಧಿಸಿದಂತೆ ಪ್ರಮುಖ ಆರೋಪಿ ಸದಾನಂದ ಕುರ್ಲಿ (31 ವರ್ಷ) ಎಂಬಾತನು ಸೇರಿ 6 ಜನ ಆರೋಪಿತರ ವಿರುದ್ಧ ಕಾನೂನು ಸಮರ ಮುಂದುವರಿದಿದೆ. ಇ ಆರು ಜನಆರೋಪಿತರ ವಿರುದ್ಧ ಅತ್ಯಂತ ಗಂಭೀರ ಸ್ವರೂಪದ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ.
ಮುಖ್ಯವಾಗಿ ಕೊಲೆ (Sec 302), ಸಾಕ್ಷ್ಯ ನಾಶಪಡಿಸುವಿಕೆ (Sec 201), ಅಪರಾಧಿಗೆ ಆಶ್ರಯ ನೀಡುವುದು (Sec 212) ಹಾಗೂ ಕಾನೂನುಬಾಹಿರ ಜನಸಮೂಹದ ಭಾಗವಾಗಿರುವುದು (Sec 149) ಸೇರಿದಂತೆ ಹಲವು ಕಠಿಣ ಸೆಕ್ಷನ್‌ಗಳನ್ನು ಪ್ರಕರಣದಲ್ಲಿ ದಾಖಲಿಸಲಾಗಿದೆ.
ಪ್ರಮುಖ ಸಾಕ್ಷಿಗಳಿಗೆ ನ್ಯಾಯಾಲಯದ ಆದೇಶ:
ಗೌರವಾನ್ವಿತ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಮೇಶ್ ದುರುಗಪ್ಪ ಏಕಬೋಟೆ ಅವರ ನ್ಯಾಯಪೀಠವು ಈ ಸಮನ್ಸ್ ಹೊರಡಿಸಿದೆ. ಗೋಕುಲ್ ರೋಡ್ ಹೊಸೂರು ನಿವಾಸಿಯಾಗಿದ್ದ ಅಕ್ಬರ್ ಅಲ್ಲಾಬಕ್ಷ ಮುಲ್ಲಾ ಹತ್ಯೆಯ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಸತತ ಸೊಮನ್ಸ್ ಜಾರಿ ಮಾಡಿದ್ದೂ , ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯ ಅಥವಾ ನಿಖರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಾಗೂ ತಮಗೆ ತಿಳಿದಿರುವ ಸತ್ಯವನ್ನು ವೀಕ್ಷಿಸಲು ಇವರಿಗೆ ನಿರ್ದೇಶನ ನೀಡಲಾಗಿದೆ.
ನ್ಯಾಯಾಲಯದ ಕಟ್ಟುನಿಟ್ಟಿನ ಎಚ್ಚರಿಕೆ:*
ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ:
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಈ ಕ್ರಿಮಿನಲ್ ಪ್ರಕರಣದ ವಿಚಾರಣೆಯು ಈಗ ನಿರ್ಣಾಯಕ ಹಂತಕ್ಕೆ ತಲುಪುತ್ತಿದ್ದು, ಈ ಪ್ರಮುಖ ಸಾಕ್ಷಿಯ ಹೇಳಿಕೆಯು ಪ್ರಕರಣದ ತೀರ್ಪಿನ ದಿಸೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನ್ಯಾಯಾಲಯದ ಶೇರಿಸ್ತೇದಾರ್ ಅವರ ಅಧಿಕೃತ ಸಹಿಯೊಂದಿಗೆ ಈ ಸಮನ್ಸ್ ಜಾರಿಯಾಗಿದ್ದು, ಇಡೀ ನಗರದ ಜನತೆ ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಮುಂದಿನ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ.
“ಒಂದು ವೇಳೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ನಿಗದಿತ ಸಮಯಕ್ಕೆ ಹಾಜರಾಗಲು ವಿಫಲರಾದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ, ಸಾಕ್ಷಿಯನ್ನು ನ್ಯಾಯಾಲಯಕ್ಕೆ ಬಲವಂತವಾಗಿ ಕರೆತರಲು ‘ವಾರೆಂಟ್’ (Warrant) ಜಾರಿಗೊಳಿಸಲಾಗುವುದು,” ಎಂದು ಸಮನ್ಸ್‌ನಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.



