ಗಂಟೆಯಲ್ಲಿ ಮಾಂಗಲ್ಯ ಸರ ಪತ್ತೆ..! ಗೋಕುಲ್ ರೋಡ್ ಪೊಲೀಸರ ಭರ್ಜರಿ ಬೇಟೆ
Dakhani

POWER CITYNEWS : HUBBALLI/ಹುಬ್ಬಳ್ಳಿ: ಕಳ್ಳತನವಾಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಗೋಕುಲ್ ರೋಡ್ ಠಾಣೆ ಪೊಲೀಸರು ಕೇವಲ 24 ಗಂಟೆಯಲ್ಲೇ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ಗಮನಾರ್ಹ ಕಾರ್ಯಾಚರಣೆ ನಡೆಸಿದ್ದಾರೆ.
ದೇಶಪಾಂಡೆ ನಗರದ ನಿವಾಸಿ ವಿನಯ್ ತಂದೆ ಕೃಷ್ಣ ಹಾಗೂ ಅವರ ಪತ್ನಿಯ ಮಾಂಗಲ್ಯ ಸರ ಕಳ್ಳತನವಾಗಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗೋಕುಲ್ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.
ದೂರು ದಾಖಲಿಸಿಕೊಂಡ ಗೋಕುಲ್ ರೋಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ್ ದಿಡಿಗಿನಾಳ ಹಾಗೂ ಸಿಬ್ಬಂದಿ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ ಮಾಂಗಲ್ಯ ಸರವನ್ನು 24 ಗಂಟೆಯೊಳಗೆ ಪತ್ತೆಹಚ್ಚಿದ್ದಾರೆ. ಪತ್ತೆಯಾದ ಮಾಂಗಲ್ಯ ಸರವನ್ನು ವಾರಸುದಾರರಿಗೆ ಮರಳಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಕೈಂ ವಿಭಾಗದ ಸಿಬ್ಬಂದಿ ಬಸವರಾಜ ಬೆಳಗಾಂವಿ, ವಸಂತ ಗುಡದಗೇರಿ, ಸುನಿಲ್ ಲಮಾಣಿ, ರುದ್ರಪ್ಪ ಹೊರೆಟ್ಟಿ, ಚಂದು ಹಿರೇಮಠ, ಧರೇಶ್ ಬೆಂಡಿಗೇರಿ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



