Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ksrtc ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತು -ಅಪರಾಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಧಾರವಾಡ

ಕೆಎಸ್ಆರಟಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಅಪರಾಧಿ ಎಂದು ಪರಿಗಣಿಸಿ ಧಾರವಾಡ
ಪ್ರಧಾನ ಸಿಜೆ ಮತ್ತು ಜೆ.ಎಮ್.ಎಫ್‌.ಸಿ‌
ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

2016 ರಲ್ಲಿ ಕೃಷಿ ವಿವಿ ಮುಂದೆ ನಡೆದ ಗಲಾಟೆ ಪ್ರಕರಣ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಧಾರವಾಡ ಉಪನಗರ ಪೊಲೀಸ ಠಾಣೆ ಗುನ್ನಾ ನಂಬರ : 50/2016.
ಕಲಂ : 353, 332,504 IPC ನೇದ್ದತಲ್ಲಿ ಆರೋಪಿತನಾದ ಪುಂಡಲಿಕ ಲಕ್ಷ್ಮಣ ಮೊರಬ. ಸಾ: ಎತ್ತಿನಗುಡ್ಡ ಧಾರವಾಡ. ಇತನು‌ ಅಪರಾಧ ಎಸಗಿದ‌ ಬಗ್ಗೆ‌‌‌ ಸಾಬೀತಾಗಿದ್ದು , ಮಾನ್ಯ ಪ್ರಧಾನ‌ ಸಿ.ಜೆ ಮತ್ತು‌ ಜೆ.ಎಮ್.ಎಫ್.ಸಿ‌ ನ್ಯಾಯಾಲಯ ಧಾರವಾಡದ‌ ನ್ಯಾಯಾಧೀಶರಾದ ಗೌ : ಶ್ರೀ ಗಿರಿಶ ಆರ್.ಬಿ‌ ರವರು‌ ಅಪರಾಧಿಗೆ ಶಿಕ್ಷೆ ಪ್ರಕಟ ಮಾಡಿದ್ದಾರೆ.

ಕಲಂ 353 IPC ಪ್ರಕಾರ ಒಂದು‌ ವರ್ಷ ಸಾದಾ ಶಿಕ್ಷೆ ಮತ್ತು 2000/- ದಂಡ.

ಕಲಂ: 332 IPC ಪ್ರಕಾರ ಒಂದು‌ ವರ್ಷ ಸಾದಾ ಶಿಕ್ಷೆ ಮತ್ತು 2000/- ದಂಡ.

ಕಲಂ: 504 IPC ಪ್ರಕಾರ ಆರು‌ ತಿಂಗಳು‌‌ ಸಾದಾ ಶಿಕ್ಷೆ‌ ಮತ್ತು 1000/- ದಂಡ ವಿಧಿಸಿ,
ಎಲ್ಲ ಶಿಕ್ಷೆಗಳನ್ನು ಏಕ ಕಾಲಕ್ಕೆ ಜಾರಿಗೊಳಿಸುವಂತೆ‌ ಆದೇಶಿಸಿರುತ್ತಾರೆ.

ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಹಾನಗಲ ಸಹಾಯಕ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

Related Articles

Leave a Reply

Your email address will not be published. Required fields are marked *