DHARWADGood jobPolitical news

ಯುವ ಮುಖಂಡನ ಮೂಲಕ ಮತ್ತೊಮ್ಮೆ ಸಹಾಯ ಹಸ್ತ ಚಾಚಿದ ಕ್ರೀಕೆಟಿಗ : ಕೆ ಎಲ್ ರಾಹುಲ್!

KL RAHUL

POWERCITY NEWS : DHARWAD

ಧಾರವಾಡ

ಆ ಕುಟುಂಬ ಸುಡುಗಾಡು ಸಿದ್ದರ ಕುಟುಂಬ. ಅಲೇಮಾರಿ ಜೀವನ ನಡೆಸಿಕೊಂಡು ಬದುಕು ನಡೆಸೋದು ಅವರ ವೃತ್ತಿ. ಆದ್ರೆ ಇಂತಹ ಬಡ‌ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿನಿಗೆ ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆಂಬ‌ ಆಸೆಗೆ ಇದೀಗ ಸಾಕಾರ ಆಗುತ್ತಿದೆ. ಖ್ಯಾತ ಕ್ರಿಕೇಟರ್ ಒಬ್ಬರು ಬಿಜೆಪಿ ಮುಖಂಡನ ಸಂಪರ್ಕದಿಂದ, ಈ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿದ್ದಾರೆ.‌ ಅಷ್ಟಕ್ಕೂ ಯಾರು ಆ ಮಹಾನ್ ಕ್ರಿಕೇಟರ್ ಅಂತೀರಾ? ಈ ಸ್ಟೋರಿ ನೋಡಿ ಗೊತ್ತಾಗುತ್ತೆ.‌

ಹೀಗಿ ವಿದ್ಯಾಭಾಸ ಮಾಡುತ್ತಾ ಮನೆಯಲ್ಲಿ ಕುಳಿತಿರುವ ಈ ವಿದ್ಯಾರ್ಥಿನಿ ಸೃಷ್ಟಿ ಕುಲಾವಿ. ಅಂತಾ.‌ ಧಾರವಾಡದ‌ ಸಿದ್ದೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದಾಳೆ.‌
ಹನುಮಂತಪ್ಪಾ ಹಾಗೂ ಸುಮಿತ್ರಾ ದಂಪತಿಯ‌ ಮಗಳು ಸೃಷ್ಟಿಗೆ‌ ಭವಿಷ್ಯದಲ್ಲಿ ಡಾಕ್ಟರ್ ಆಗುವ ಕನಸು ಇದೆ. ಆದ್ರೆ ಸುಡಗಾಡು ಸಿದ್ದರ ಜನಾಂಗದಲ್ಲಿ ಹುಟ್ಟಿರುವ ಇವಳಿಗೆ ಬಡತನ ಶಾಪವಾಗಿತ್ತು. ಈ ಶಾಪಕ್ಕೆ ವಿದ್ಯಾಭ್ಯಾಸದಿಂದ ವಂಚಿತವಾಗುವ ಹಾಗೆ ಆಗಿತ್ತು. ತಕ್ಷಣ ಮಾಹಿತಿ ತಿಳಿದ ಬಿಜೆಪಿ ಮುಖಂಡ ಹಾಗೂ ಸಮಾಜಸೇವಕ ಮಂಜುನಾಥ ಹೆಬಸೂರು ಖ್ಯಾತ ‌ಕ್ರಿಕೇಟಿಗ ಕೆ.ಎಲ್.ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ‌ ಸಹಾಯ ಮಾಡಿಸಿದ್ದಾರೆ ಅಂತಾ ಬಾಲಕಿ‌ ತಂದೆ ಹನುಮಂತಪ್ಪ ಹೆಮ್ಮೆಯಿಂದ ಹೇಳ್ತಾರೆ.‌

1996 ರಲ್ಲಿ ದೀಪಕ ಗಾಂವ್ಕರ್ ಹಾಗೂ ಅನೀತಾ ಗಾಂವ್ಕರ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್ ‌ಎಕ್ಸಲೆನ್ಸ್ ಶಾಲೆ ಉತ್ತಮ ಗುಣಮಟ್ಟದ ಆಗಿದ್ದು, ಈ ಶಾಲೆಯಲ್ಲಿ ಸೃಷ್ಟಿ ಕುಲಾವಿ ವ್ಯಾಸಾಂಗ ಮಾಡಲು ಕೆ.ಎಲ್.ರಾಹುಲ್ ಅವರು ನೆರವು‌ ನೀಡಿದ್ದಾರೆ. ಇದೊಂದು ನಮ್ಮ ಶಾಲೆಗೆ ಹಾಗೂ ನಮಗೂ ಹೆಮ್ಮೆ ಅಂತಾರೆ ಶಾಲೆಯ‌ ಪ್ರಾಂಶುಪಾಲರಾದ ಮಾಲಾಶ್ರಿ ನಯ್ಯರ್.

ಸದಾಕಾಲ ಕ್ರಿಕೇಟನಲ್ಲಿ ಕೆ.ಎಲ್.ರಾಹುಲ್ ಬ್ಯೂಸಿ‌ ಇರ್ತಾರೆ.‌ ಸುಡಗಾಡ ಸಿದ್ದರ ಜನಾಂಗದ ವಿದ್ಯಾರ್ಥಿನಿಗೆ ಓದಲು ಆರ್ಥಿಕ ಸಹಾಯದ ಹಸ್ತ ಚಾಚಿದ್ದು ಹೆಮ್ಮೆ ಎನ್ನುವ ಮಾತುಗಳು ಧಾರವಾಡ ಜಿಲ್ಲೆಯಲ್ಲಿ ಕೇಳಿ‌ ಬರುತ್ತಿವೆ. ಬಡ ವಿದ್ಯಾರ್ಥಿಗೆ ದಾರಿದೀಪವಾಗಲೂ ಸಹಕರಿಸಿದ
ಧಾರವಾಡದ ಸಮಾಜಿಕ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ಮಂಜುನಾಥ ಹೆಬಸೂರು ಅವರಿಗೂ ಅಭಿನಂದನೆಗಳ ಮಹಾಪೂರವೇ ಹರಿದು‌ ಬರುತ್ತಿದೆ.‌

Related Articles

Leave a Reply

Your email address will not be published. Required fields are marked *

Back to top button